ರಜನಿಕಾಂತ್‌ರ 'ಕೂಲಿ' ಚಿತ್ರಕ್ಕೆ ಭರ್ಜರಿ ಓಪನಿಂಗ್, ಮಿಶ್ರ ಪ್ರತಿಕ್ರಿಯೆ

ಸಿನಿಮಾಗಳನ್ನು ವೀಕ್ಷಿಸಿರುವ ಜನರು ಸಾಮಾಜಿಕ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಶ್ರುತಿ ಹಾಸನ್, ಸೌಬಿನ್ ಶಾಹಿರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.;

Update: 2025-08-14 08:48 GMT

ಕೂಲಿ ಸಿನಿಮಾ 

ರಜನಿಕಾಂತ್ ಅವರ 'ಕೂಲಿ' ಸಿನಿಮಾ ಪ್ರಪಂಚದಾದ್ಯಂತ ಗುರುವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಿನಿಮಾ ವೀಕ್ಷಿಸಲು ಜನರು ಚಿತ್ರಮಂದಿರಗಳಿಗೆ ಧಾವಿಸಿದ್ದಾರೆ. 

ಸಿನಿಮಾಗಳನ್ನು ವೀಕ್ಷಿಸಿರುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಶ್ರುತಿ ಹಾಸನ್, ಸೌಬಿನ್ ಶಾಹಿರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.  ಬಾಲಿವುಡ್‌ ನಟ ಅಮೀರ್ ಖಾನ್ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ವೀಕ್ಷಕರ ಅಭಿಪ್ರಾಯವೇನು? 

ಕೂಲಿ ನೋಡಿದ ಮನೀಶ್ ಯಾದವ್ ಎಂಬ ಟ್ವಿಟರ್‌ ಬಳಕೆದಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಪರದೆ ಬೆಳಗಿದ ತಕ್ಷಣ, ಶಿಳ್ಳೆಗಳು, ಚಪ್ಪಾಳೆಗಳು ಮತ್ತು ಹುಚ್ಚುತನಗಳು ಕಾಣಿಸಿಕೊಂಡವು. #ಕೂಲಿ #ರಜನೀಕಾಂತ್ ಇದು ಕೇವಲ ಸಿನಿಮಾ ಅಲ್ಲ, ಹಬ್ಬ ಎಂದು ಬರೆದುಕೊಂಡಿದ್ದಾರೆ. 

ನವೀನ್ ಎಂಬವರು, ಕೂಲಿ ಅತ್ಯುತ್ತಮ ಚಿತ್ರ, ಚಲನಚಿತ್ರಗಳಲ್ಲಿ 50 ವರ್ಷಗಳನ್ನು ಪೂರೈಸಿದ ರಜನೀಕಾಂತ್ ಅವರಿಗೆ ಅಭಿನಂದನೆಗಳು. ಚಿತ್ರದ ಎಲ್ಲಾ ಪಾತ್ರಗಳು ಅದ್ಭುತವಾಗಿದ್ದವು ಎಂದು ಬರೆದಿದ್ದಾರೆ. 

ಚೈತನ್ಯ ವರ್ಮಾ ಎಂಬವರು ನಾನು ಕೂಲಿಯನ್ನು ನೋಡಿದ್ದೇನೆ, ರಜನೀಕಾಂತ್ ಅವರ ತೋರಣ ಮತ್ತು ಚಿತ್ರ ನಿಜವಾಗಿಯೂ ಅದ್ಭುತವಾಗಿದೆ. ಅನಿರುದ್ಧ್ ಅವರ ಸಂಗೀತವೂ ಸಹ ಪ್ರಬಲವಾಗಿದೆ. ಪೈಸಾ ವಸೂಲ್ ಸಿನಿಮಾ ಎಂದು ಬರೆದಿದ್ದಾರೆ. 

ಗೋಕುಲ್ ರಾಮ್ ಎಂಬ ಬಳಕೆದಾರರು, ಕೂಲಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಲವ್ ಯು ತಲೈವಾ. ವಿವೇಕ್ ಮಿಶ್ರಾ ಎಂಬ ಬಳಕೆದಾರರು, ಕೂಲಿಯಲ್ಲಿನ ಸನ್ನಿವೇಶಗಳು ಅದ್ಭುತವಾಗಿವೆ. ಉಪೇಂದ್ರ-ನಾಗಾರ್ಜುನ ಉತ್ತಮವಾಗಿ ಕಾಣುತ್ತಿದ್ದರು ಎಂದು ಬರೆದಿದ್ದಾರೆ. 

ಎಲ್ಲ ವೀಕ್ಷಕರಿಗೂ ಈ ಸಿನಿಮಾ ಇಷ್ಟವಾಗಿಲ್ಲ. ಕೆಲವರು ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ. ರಾಜು ಎಂಬ ಬಳಕೆದಾರ ಈ ಸಿನಿಮಾ ಉತ್ತಮವಾಗಿಲ್ಲ. ದಯವಿಟ್ಟು ಅದನ್ನು ನೋಡಬೇಡಿ ಮತ್ತು ನಿಮ್ಮ ಹಣವನ್ನು ಉಳಿಸಿ" ಎಂದು ಸಲಹೆ ನೀಡಿದ್ದಾರೆ.

ಅನಾಸ್ ಎಂಬ ಬಳಕೆದಾರರು ವಿಪತ್ತು ಚಲನಚಿತ್ರ, ನನ್ನ ಸಂಪೂರ್ಣ ಮನಸ್ಥಿತಿಯನ್ನು ಹಾಳುಮಾಡಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ- ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೂಲಿ ಚಿತ್ರದ ಕಥಾಹಂದರವು ದುರ್ಬಲವಾಗಿದೆ. ಅದರಲ್ಲಿ ನೋಡಲು ಯೋಗ್ಯವಾದ ಏನೂ ಇಲ್ಲ. ರಾಜ್ ಎಂಬ ಬಳಕೆದಾರರು  ಕ್ಲೈಮ್ಯಾಕ್ಸ್ ದುರ್ಬಲವಾಗಿತ್ತು. ಮೊದಲಾರ್ಧ ಚೆನ್ನಾಗಿತ್ತು, ಆದರೆ ಮಧ್ಯಂತರದ ನಂತರ ಚಿತ್ರ ದುರ್ಬಲವಾಗಿದೆ ಎಂದು ಬರೆದಿದ್ದಾರೆ. 

ಕೆಲ ಟೀಕೆಗಳ ಹೊರತಾಗಿಯೂ, ಕೂಲಿ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. ಚಿತ್ರ ಪ್ರೀ-ಸೇಲ್ಸ್​ನಲ್ಲಿ 100 ಕೋಟಿ ರೂ.ಗಳನ್ನು ದಾಡಿದೆ. ಮೊದಲ ದಿನಕ್ಕೇನೆ 12 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.

Tags:    

Similar News