ದೀಪಾವಳಿ ಹಬ್ಬದಂದು ಮುದ್ದು ಮಗಳ ಪೋಟೊ ಹಂಚಿಕೊಂಡ ದೀಪಿಕಾ ಪಡುಕೋಣೆ ದಂಪತಿ
ದೀಪಿಕಾ ಪಡುಕೋಣೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ಹ್ಯಾಪಿ ದೀಪಾವಳಿ" ಎಂಬ ಶೀರ್ಷಿಕೆಯೊಂದಿಗೆ ಕೆಲವು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪುತ್ರಿ ದುವಾಳ ಮುಖ ತೋರಿಸಿದ ಜೋಡಿ
ಬಾಲಿವುಡ್‌ನ ಜನಪ್ರಿಯ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಕಳೆದ ವರ್ಷ ಸೆಪ್ಟೆಂಬರ್ 8, 2024 ರಂದು ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾಗಿದ್ದರು. ಅಂದಿನಿಂದ, ಈ ಜೋಡಿ ತಮ್ಮ ಮಗಳ ಮುಖವನ್ನು ಅಭಿಮಾನಿಗಳಿಂದ ಮರೆಮಾಚಿದ್ದರು. ಆದರೆ, ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಂಪತಿ ತಮ್ಮ ಪ್ರೀತಿಯ ಮಗಳು 'ದುವಾ'ಳ ಮೊದಲ ನೋಟವನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಸಿಹಿ ಉಡುಗೊರೆ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ಹ್ಯಾಪಿ ದೀಪಾವಳಿ" ಎಂಬ ಶೀರ್ಷಿಕೆಯೊಂದಿಗೆ ಕೆಲವು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದುವಾಳ ಮುದ್ದು ಮುಖದ ದರ್ಶನ
ಹಂಚಿಕೊಂಡಿರುವ ಫೋಟೋಗಳಲ್ಲಿ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಮಗಳು ದುವಾಳನ್ನು ಪ್ರೀತಿಯಿಂದ ಹಿಡಿದಿರುವುದು ಕಂಡುಬರುತ್ತದೆ. ಒಂದು ಫೋಟೋದಲ್ಲಿ, ರಣವೀರ್ ಸಿಂಗ್ ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದಿದ್ದು, ದಂಪತಿಗಳು ಮಗಳನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ದುವಾಳ ಸಿಹಿ ನಗು ಎಲ್ಲರ ಗಮನ ಸೆಳೆದಿದೆ.
ದೀಪಾವಳಿ ಪೂಜೆಯ ಫೋಟೋದಲ್ಲಿ, ದುವಾ ಕೆಂಪು ಉಡುಪಿನಲ್ಲಿ ತನ್ನ ತಾಯಿಯ ಮಡಿಲಲ್ಲಿ ಕುಳಿತು, ಕೈಗಳನ್ನು ಜೋಡಿಸಿ ಪ್ರಾರ್ಥಿಸುತ್ತಿರುವ ದೃಶ್ಯ ಮನಸೆಳೆಯುವಂತಿದೆ. ಈ ಫೋಟೋಕ್ಕಾಗಿ ದೀಪಿಕಾ ಮತ್ತು ದುವಾ ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿದ್ದಾರೆ. ಬಿಳಿ ಬಣ್ಣದ ಉಡುಪಿನಲ್ಲಿರುವ ರಣವೀರ್ ಸಿಂಗ್ ತಮ್ಮ ಮಗಳ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ.
ಸೆಲೆಬ್ರಿಟಿಗಳಿಂದ ಪ್ರೀತಿಯ ಮಹಾಪೂರ
ಅನಿರೀಕ್ಷಿತವಾಗಿ ಪೋಸ್ಟ್ ಆದ ಈ ಫೋಟೋಗಳು ಬಾಲಿವುಡ್‌ನ ಸೆಲೆಬ್ರಿಟಿಗಳು ಮತ್ತು ನೆಟಿಜನ್‌ಗಳನ್ನು ಸಂತೋಷದಲ್ಲಿ ಮುಳುಗಿಸಿದೆ.
ನಟಿ ಅನನ್ಯಾ ಪಾಂಡೆ "ಓ ದೇವರೇ..." ಎಂದು ಹೇಳಿದರೆ, ಹನ್ಸಿಕಾ ಮೋಟ್ವಾನಿ "ತುಂಬಾ ಮುದ್ದಾಗಿದೆ" ಎಂದು ಬರೆದಿದ್ದಾರೆ. ಬಿಪಾಶಾ ಬಸು ಅವರು, "ವಾವ್, ದುವಾ, ಪುಟ್ಟ ತಾಯಿಯಂತೆ. ದೇವರು ದುವಾವನ್ನು ಆಶೀರ್ವದಿಸಲಿ. ದುರ್ಗಾ ದುರ್ಗಾ" ಎಂದು ಹಾರೈಸಿದ್ದಾರೆ.
ದುವಾ ಹೆಸರಿನ ವಿಶೇಷ ಅರ್ಥ
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ತಮ್ಮ ಮಗುವಿಗೆ 'ದುವಾ' ಎಂದು ಹೆಸರಿಟ್ಟಿದ್ದಾರೆ. ಇದು ಅರೇಬಿಕ್ ಪದವಾಗಿದ್ದು, ಆಕ್ಸ್‌ಫರ್ಡ್ ಡಿಕ್ಷನರಿ ಆಫ್ ರಿಲಿಜನ್ಸ್ ಪ್ರಕಾರ, ಇದರ ಅರ್ಥ ಪ್ರಾರ್ಥನೆ ಎಂದಾಗಿದೆ.
ಸದ್ಯ, ರಣವೀರ್ ಸಿಂಗ್ ಅವರು ಡಿಸೆಂಬರ್ 6,ರಂದು ಬಿಡುಗಡೆಯಾಗಲಿರುವ ʻಧುರಂಧರ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ಅವರು ʻಡಾನ್ 3ʼ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ದೀಪಿಕಾ ಪಡುಕೋಣೆ ಅವರು ಅಲ್ಲು ಅರ್ಜುನ್ ಜೊತೆ ಅಟ್ಲೀ ಅವರ ಮುಂದಿನ ಚಿತ್ರಕ್ಕೆ ಮತ್ತು ಶಾರುಖ್ ಖಾನ್ ಅವರ ʻಕಿಂಗ್ʼ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.