ಪನೋರಮಗೆ ಕನ್ನಡದ ‘ಸು ಫ್ರಮ್‍ ಸೋ’ ಮತ್ತು ‘ವನ್ಯಾ’ ಚಿತ್ರಗಳ ಆಯ್ಕೆ

ಈ ಚಿತ್ರೋತ್ಸವದಲ್ಲಿ 81 ದೇಶಗಳ 240ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿದ್ದು, ಈ ಬಾರಿಯ ಪನೋರಾಮ ವಿಭಾಗದ ಉದ್ಘಾಟಕ ಚಿತ್ರವಾಗಿ ತಮಿಳಿನ ‘ಅಮರನ್‍’ ಚಿತ್ರ ಪ್ರದರ್ಶನವಾಗಲಿದೆ.

Update: 2025-11-11 11:00 GMT

ಸು ಫ್ರಮ್‍ ಸೋ

Click the Play button to listen to article

ಗೋವಾದ ಪಣಜಿಯಲ್ಲಿ ಇದೇ ನವೆಂಬರ್ 20ರಿಂದ 28ರವರೆಗೂ 56ರನೇ ಇಂಟರ್​​ನ್ಯಾಷನಲ್‍ ಫಿಲಂ ಫೆಸ್ಟಿವಲ್‍ ಆಫ್ ಇಂಡಿಯಾ ಆಯೋಜಿತವಾಗಿದ್ದು, ಈ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಕನ್ನಡದ ‘ಸು ಫ್ರಮ್ ಸೋ’ ಮತ್ತು ‘ವೆನ್ಯಾ’ ಚಿತ್ರಗಳು ಪ್ರದರ್ಶನವಾಗಲಿವೆ.

ಈ ಚಿತ್ರೋತ್ಸವದಲ್ಲಿ 81 ದೇಶಗಳ 240ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿದ್ದು, ಈ ಬಾರಿಯ ಪನೋರಮ ವಿಭಾಗದ ಉದ್ಘಾಟಕ ಚಿತ್ರವಾಗಿ ತಮಿಳಿನ ‘ಅಮರನ್‍’ ಚಿತ್ರ ಪ್ರದರ್ಶನವಾಗಲಿದೆ. ರಾಜಕುಮಾರ್ ಪೆರಿಯಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್‍ ಮತ್ತು ಸಾಯಿಪಲ್ಲವಿ ನಟಿಸಿದ್ದಾರೆ. ಇನ್ನು, ನಾನ್‍-ಫೀಚರ್ ಚಿತ್ರಗಳ ಪೈಕಿ ‘ಕಾಕೋರಿ’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಪನೋರಮಾ ವಿಭಾಗದಲ್ಲಿ ಈ ಬಾರಿ ವಿವಿಧ ಭಾಷೆಗಳ 25 ಚಲನಚಿತ್ರಗಳು ಹಾಗೂ 25 ನಾನ್‍ ಫೀಚರ್‌ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಆಯ್ಕೆಯಾಗಿರುವ ಚಿತ್ರಗಳ ಪೈಕಿ ಸರ್ಕೀತ್‍ (ಮಲಯಾಳಂ), ಅಮರನ್‍ (ತಮಿಳು), ವಿಮುಕ್ತ್ (ಭ್ರಜ್), ದಿ ಬೆಂಗಾಲ್‍ ಫೈಲ್ಸ್ (ಹಿಂದಿ), ತನ್ವಿ ದಿ ಗ್ರೇಟ್‍ (ಹಿಂದಿ), ವನ್ಯಾ (ಕನ್ನಡ), ವೈಟ್‍ ಸ್ನೋ (ಉರ್ದು), ಭೈರ್ನೋನ್‍ ದಾ (ಅಸ್ಸಾಮಿ), ಗೊಂದಾಳ್‍ (ಮರಾಠಿ), ಸು ಫ್ರಮ್‍ ಸೋ (ಕನ್ನಡ), ಪೊಕ್ಕಿರಜೇರ್‍ ಧಿಮ್‍ (ಬಂಗಾಲಿ), ಇಂಬು (ತುಳು), ದೃಶ್ಯ ಅದೃಶ್ಯ (ಮರಾಠಿ), ಒಯಿತರೆಯಿ (ಮಣಿಪುರಿ), ಬರೋಬಾಬು (ಬಂಗಾಲಿ), ಪಿರಂಥನಾಳ್‍ ವಳತುಕ್ಕಳ್‍ (ತಮಿಳು) ಮಲಿಪುಟ್‍ ಮೆಲೋಡೀಸ್‍ (ಒರಿಯಾ), ಮುಕ್ಕಂ ಪೋಸ್ಟ್ ಬೊಂಬಿಲ್ವಾಡಿ (ಮರಾಠಿ), ಗ್ರೌಂಡ್‍ ಜೀರೋ (ಹಿಂದಿ), ವಿಸ್ಪರ್ಸ್ ಆಫ್‍ ದಿ ಮೌಂಟೇನ್ಸ್ (ರಾಜಾಸ್ಥಾನಿ) ಮುಂತಾದ ಚಿತ್ರಗಳಿವೆ.

ಇನ್ನು, ಮುಖ್ಯವಾಹಿನಿ ಸಿನಿಮಾಗಳ ಪೈಕಿ ವಿಕ್ಕಿ ಕೌಶಾಲ್‍ ಅಭಿನಯದ ಹಿಂದಿ ಚಿತ್ರ ‘ಛಾವಾ’, ಮೋಹನ್‍ ಲಾಲ್‍ ಅಭಿನಯದ ಮಲಯಾಳಂ ಚಿತ್ರ ‘ತುಡರುಂ’ ಮತ್ತು ವೆಂಕಟೇಶ್‍ ಅಭಿನಯದ ತೆಲುಗು ಚಿತ್ರ ‘ಸಂಕ್ರಾಂತಿಕಿ ವಸ್ತುನ್ನಾಂ’ ಪ್ರದರ್ಶನಗೊಳ್ಳಲಿವೆ. ರಾಜ ಬಂದೇಲ ನೇತೃತ್ವದ ಆಯ್ಕೆ ಸಮಿತಿಯು ಈ ಚಿತ್ರಗಳನ್ನು ಪನೋರಮಾಗೆ ಆಯ್ಕೆ ಮಾಡಿವೆ.

ಚಿತ್ರರಂಗದಲ್ಲಿ ನಟರಾಗಿ 50 ವರ್ಷಗಳನ್ನು ಪೂರೈಸಿರುವ ಹಿರಿಯ ನಟ ರಜನಿಕಾಂತ್‍ ಅವರನ್ನು ಈ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ.

Tags:    

Similar News