'ಲವ್ ಆಂಡ್ ವಾರ್' ಸೆಟ್‌ನಲ್ಲಿ ಆಲಿಯಾ ಭಟ್ 'ರೆಟ್ರೋ ಲುಕ್' ವೈರಲ್

'ಲವ್ ಆಂಡ್ ವಾರ್' ಸೆಟ್‌ನಿಂದ ಆಲಿಯಾ ಭಟ್ ಅವರ ಫೋಟೋ ಲೀಕ್ ಆಗಿದೆ. ಹೊಳೆಯುವ ಸೀರೆಯುಟ್ಟು, ಎತ್ತರದ 'ಬನ್' ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡ ಆಲಿಯಾ ಅವರ ಈ ಲುಕ್, 1960 ಮತ್ತು 70 ರ ದಶಕದ ಬಾಲಿವುಡ್‌ನ ಸೊಗಸಾದ ರೆಟ್ರೋ ಶೈಲಿಎ ನೆನಪಿಸುತ್ತದೆ.

Update: 2025-10-18 05:27 GMT

ನಟಿ ಆಲಿಯಾ ಭಟ್ ಅವರ ವಿಶೇಷ ಲುಕ್‌

Click the Play button to listen to article

ಮಾಸ್ಟರ್ ಫಿಲ್ಮ್ ಮೇಕರ್ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಚಿತ್ರ 'ಲವ್ ಆಂಡ್ ವಾರ್' ಚಿತ್ರೀಕರಣದಲ್ಲಿರುವ ನಟಿ ಆಲಿಯಾ ಭಟ್ ಅವರ ವಿಶೇಷ ಲುಕ್‌ನ ಚಿತ್ರವೊಂದು ವೈರಲ್‌ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಆಲಿಯಾ ಅವರು ಪತಿ ರಣಬೀರ್ ಕಪೂರ್ ಮತ್ತು ನಟ ವಿಕ್ಕಿ ಕೌಶಲ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಆಲಿಯಾ ಅವರ ವಿಂಟೇಜ್ ಲುಕ್

'ಲವ್ ಆಂಡ್ ವಾರ್' ಸೆಟ್‌ನಿಂದ ಆಲಿಯಾ ಭಟ್ ಅವರ ಫೋಟೋ ಲೀಕ್ ಆಗಿದೆ. ಹೊಳೆಯುವ  ಸೀರೆಯುಟ್ಟು, ಎತ್ತರದ 'ಬನ್' ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡ ಆಲಿಯಾ ಅವರ ಈ ಲುಕ್, 1960 ಮತ್ತು 70 ರ ದಶಕದ ಬಾಲಿವುಡ್‌ನ ಸೊಗಸಾದ ರೆಟ್ರೋ ಶೈಲಿಯನ್ನು ನೆನಪಿಸುತ್ತದೆ. ಸೀರೆಯ ಸೆರಗನ್ನು ಹಿಡಿದು ನಡೆಯುತ್ತಿದ್ದ ಆಲಿಯಾ ಅವರು, ಆ ದಶಕದ ಕ್ಲಾಸಿಕ್ ನಾಯಕಿಯ ಗಾಂಭೀರ್ಯವನ್ನು ತೆರೆಯ ಮೇಲೆ ತರಲು ಸಿದ್ಧರಾಗಿರುವಂತೆ ಭಾಸವಾಗಿದೆ.

ವರದಿಗಳ ಪ್ರಕಾರ, ಈ ಚಿತ್ರವು 1964 ರ ಜನಪ್ರಿಯ ಬಾಲಿವುಡ್ ಕ್ಲಾಸಿಕ್ ಚಿತ್ರ 'ಸಂಗಮ್' (ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ಅಭಿನಯದ) ಅನ್ನು ಆಧರಿಸಿರಬಹುದು ಎಂದು ಹೇಳಲಾಗಿದೆ.

ತಮ್ಮ ಚೊಚ್ಚಲ ಚಿತ್ರ 'ಸಾವರಿಯಾ' ನಂತರ ಮತ್ತೆ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕೆಲಸ ಮಾಡುತ್ತಿರುವ ನಟ ರಣಬೀರ್ ಕಪೂರ್ ಅವರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ಲವ್ ಆಂಡ್ ವಾರ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ರణಬೀರ್ ಅವರು, ಈ ಚಿತ್ರವು ಪ್ರತಿಯೊಬ್ಬ ನಟನ ಕನಸು ಎಂದು ಬಣ್ಣಿಸಿದ್ದಾರೆ. ಜೊತೆಗೆ, ನಿರ್ದೇಶಕ ಬನ್ಸಾಲಿ ಅವರ ಕಾರ್ಯವೈಖರಿಯ ಬಗ್ಗೆ ಅತೀವ ಗೌರವ ವ್ಯಕ್ತಪಡಿಸಿದ್ದಾರೆ. ʻಲವ್ ಆಂಡ್ ವಾರ್' ಚಿತ್ರವು ಪ್ರತಿಯೊಬ್ಬ ನಟನ ಕನಸು. ಆಲಿಯಾ ಮತ್ತು ವಿಕ್ಕಿ ಅವರಂತಹ ಅದ್ಭುತ ನಟರೊಂದಿಗೆ ಮತ್ತು ಮಾಸ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ. ನಾನು 17 ವರ್ಷಗಳ ಹಿಂದೆ ಅವರೊಂದಿಗೆ ಕೆಲಸ ಮಾಡಿದ್ದೆ. ನಾನು ಸ್ಪಷ್ಟವಾಗಿ ಹೇಳಬಲ್ಲೆ. ಅವರಷ್ಟು ಕಷ್ಟಪಟ್ಟು ಕೆಲಸ ಮಾಡುವ, ಪಾತ್ರಗಳು, ಭಾವನೆಗಳು, ಸಂಗೀತ, ಭಾರತೀಯ ಸಂಸ್ಕೃತಿ ಮತ್ತು ನಮ್ಮ ಮೌಲ್ಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಇನ್ನೊಬ್ಬ ಮನುಷ್ಯರನ್ನು ನಾನು ಭೇಟಿಯಾಗಿಲ್ಲ ಎಂದು ರಣಬೀರ್ ಹೇಳಿದರು.

ಬನ್ಸಾಲಿ ಅವರ ಸೆಟ್‌ನಲ್ಲಿನ ಕೆಲಸದ ಪ್ರಕ್ರಿಯೆ ದೀರ್ಘ ಮತ್ತು ದಣಿವಿನಿಂದ ಕೂಡಿರಬಹುದು, ಆದರೆ ಅದು ಕಲಾವಿದನಿಗೆ ನೀಡುವ ತೃಪ್ತಿ ಅಮೂಲ್ಯ ಎಂದು ರಣಬೀರ್ ಹೇಳಿದ್ದಾರೆ. ಅವರ ಸೆಟ್‌ನಲ್ಲಿ ಇರುವುದು ದಣಿವಿನ ಸಂಗತಿ, ಪ್ರಕ್ರಿಯೆ ಕೂಡ ಕಠಿಣವೆನಿಸಬಹುದು, ಆದರೆ ಅಂತಿಮವಾಗಿ, ಒಬ್ಬ ಕಲಾವಿದನಾಗಿ, ಅದು ತೃಪ್ತಿಯನ್ನು ನೀಡುತ್ತದೆ. ಏಕೆಂದರೆ ಅವರು ನಿಜವಾಗಿಯೂ ಕಲೆಯನ್ನು ಪೋಷಿಸುತ್ತಾರೆ. ನಟರಾಗಿ, ಇದು ಇಲ್ಲಿಯವರೆಗೆ ನಿಜವಾಗಿಯೂ ಅದ್ಭುತವಾದ ಅನುಭವವಾಗಿದೆ ಎಂದು ರಣಬೀರ್ ಕಪೂರ್ ತಿಳಿಸಿದರು.

Tags:    

Similar News