'ಪುಷ್ಪ-2' ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ

ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಕಳೆದ ವರ್ಷವೇ ಘೋಷಿಸಲಾಗಿತ್ತು. ಆದರೆ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ಮತ್ತೆ 4 ತಿಂಗಳು ಮುಂದೆ ಹೋಗಿದೆ.;

Update: 2024-06-18 13:49 GMT
ಪುಪ್ಪ- 2 ಅಲ್ಲು ಅರ್ಜುನ್‌ ಲುಕ್‌
Click the Play button to listen to article

Pushpa-2 release | ಪುಷ್ಪ-2 ಸಿನಿಮಾ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ. 'ಪುಷ್ಪ'-2 ಸಿನಿಮಾ ಆಗಸ್ಟ್‌ 15ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಕಳೆದ ವರ್ಷ ಮಾರ್ಚ್‌ನಲ್ಲಿ ಘೋಷಣೆ ಮಾಡಿತ್ತು. ಆದರೆ, ಇದೀಗ ಮತ್ತೆ ದಿನಾಂಕ ಮುಂದೂಡಿರುವುದಾಗಿ ಹೇಳಿದೆ.

ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಕಳೆದ ವರ್ಷವೇ ಘೋಷಿಸಲಾಗಿತ್ತು. ಆದರೆ ಇನ್ನು 4 ತಿಂಗಳು ತಡವಾಗಿ ಮತ್ತೆ ಪುಪ್ಪ- 2 ಸಿನಿಮಾ ತೆರಗೆ ಬರಲಿದೆ. ಈಗಾಗಲೇ 2 ಸಾಂಗ್ಸ್, ಟೀಸರ್ ರಿಲೀಸ್ ಮಾಡಿ ಸದ್ದು ಮಾಡಿದ್ದ ಚಿತ್ರತಂಡ ಇದೀಗ ನಿರಾಸೆ ಮೂಡಿಸಿದೆ.

'ಪುಷ್ಪ'-2 ರಿಲೀಸ್ ತಡವಾಗಲು ಕಾರಣ ಏನು ಎನ್ನುವುದನ್ನು ಚಿತ್ರತಂಡ ವಿವರಿಸಿದೆ. ಆಗಸ್ಟ್ 15 ರ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳುವುದಿಲ್ಲ, ಒಳ್ಳೆ ಔಟ್‌ಪುಟ್ ಹಾಗೂ ಗುಣಮಟ್ಟಕ್ಕಾಗಿ ರಿಲೀಸ್ ಮುಂದೂಡಬೇಕಾಗುತ್ತದೆ, ಕಾಯಿಸಿದರೂ ಉತ್ತಮವಾದದ್ದನ್ನು ನೀಡಲಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಫ್ಯಾನ್ಸ್, ನಿರ್ಮಾಣ ಮತ್ತು ವ್ಯಾಪಾರ ಪಾಲುದಾರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.

Tags:    

Similar News