ʼನಾಟ್ ಔಟ್ʼ ಬಿಡುಗಡೆಗೆಗಾಗಿ ಸಹ ಕಲಾವಿದರ ಪ್ರತಿಭಟನೆ
ಕಲಾವಿದರ ಬಳಗವೊಂದು ʼನಾಟ್ ಔಟ್ʼ ಚಿತ್ರದ ಮೂಲಕ ಬಹುಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಇದೀಗ ಚಿತ್ರದ ಬಿಡುಗಡೆಗಾಗಿ ಪ್ರತಿಭಟನೆ ಮಾಡಿದ್ದಾರೆ.;
ಸಹ ಕಲಾವಿದರಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಕಲಾವಿದರ ಬಳಗವೊಂದು ʼನಾಟ್ ಔಟ್ʼ ಚಿತ್ರದ ಮೂಲಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಇದೀಗ ಚಿತ್ರದ ಬಿಡುಗಡೆಗಾಗಿ ಪ್ರತಿಭಟನೆ ಮಾಡಿದ್ದಾರೆ.
ರವಿಶಂಕರ್ (ಆರ್ಮುಗಂ), ಅಜಯ್ ಪೃಥ್ವಿ, ರಚನ ಇಂದರ್, ಕಾಕ್ರೋಚ್ ಸುದಿ, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿನ್ ಹಾಸನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ, ಸಲ್ಮಾನ್‌ನಂತಹ ನಟರ ಜೊತೆ ಇನ್ನು ಹತ್ತಾರು ಜನ ಕನ್ನಡ ಚಿತ್ರರಂಗದ ಸಹ ಕಲಾವಿದರಾಗಿ ನಟನೆ ಮಾಡುತ್ತಾ ಬಂದಿರುತ್ತಾರೆ.
ಆ ಸಹ ಕಲಾವಿದರು ತಾವು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ʼನಾಟ್ ಔಟ್ʼ ಚಿತ್ರ ಬಹುಬೇಗ ಬಿಡುಗಡೆಯಾಗಲಿ ಮತ್ತು ಇನ್ನಷ್ಟು ಅವಕಾಶಗಳು ಚಿತ್ರರಂಗದಲ್ಲಿ ತಮಗೆ ಸಿಗಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಲಾವಿದರು ಒಂದು ಚಿತ್ರದ ಬಿಡುಗಡೆಗಾಗಿ ಒಟ್ಟಾಗಿ ಸೇರಿ ಪ್ರತಿಭಟನೆ ಮಾಡಿದ್ದಾರೆ.
ʼನಾಟ್ ಔಟ್ʼ ಚಿತ್ರವು ರಾಷ್ಟ್ರಕೂಟ ಪಿಕ್ಚರ್ಸ್ ಅಡಿಯಲ್ಲಿ ಮೂಡಿ ಬಂದಿದೆ. ವಿ ರವಿಕುಮಾರ್ ಮತ್ತು ಸಂಶುದ್ದೀನ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಅಂಬರೀಶ್ ಎಂ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಈ ಪ್ರತಿಭಟನೆಯ ನಂತರ ಚಿತ್ರತಂಡವು ಮುಂದಿನ ತಿಂಗಳು ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.