ಜೈಪುರ ಚಿತ್ರೋತ್ಸವ | ʼಮೃತ್ಯೋರ್ಮʼಕ್ಕೆ ಇಂಡಿಯನ್ ಪನೋರಮ ಪ್ರಶಸ್ತಿ
ಸುಧೀರ್ ಅತ್ತಾವರ ನಿರ್ದೇಶನದ ʼಮೃತ್ಯೋರ್ಮʼ ಚಿತ್ರ ಇಂಡಿಯನ್ ಪನೋರಮಕ್ಕೆ ಆಯ್ಕೆಗೊಂಡು, ಅತ್ಯುತ್ತಮ ಚಿತ್ರ ಜ್ಯೂರಿ ಪ್ರಶಸ್ತಿಗೆ ಭಾಜನವಾಗಿದೆ.;
By : The Federal
Update: 2024-02-09 05:11 GMT
ಜೈಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಧೀರ್ ಅತ್ತಾವರ ನಿರ್ದೇಶನದ ʼಮೃತ್ಯೋರ್ಮʼ ಚಿತ್ರ ಇಂಡಿಯನ್ ಪನೋರಮಕ್ಕೆ ಆಯ್ಕೆ ಗೊಂಡು, ಅತ್ಯುತ್ತಮ ಚಿತ್ರ ಜ್ಯೂರಿ ಪ್ರಶಸ್ತಿಗೆ ಭಾಜನವಾಗಿದೆ.
ಫೆ 9 ರಿಂದ 13ರ ವರೆಗೆ ನಡೆಯುವ ಜೈಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಮಾರು 67 ದೇಶಗಳಿಂದ 329 ಚಿತ್ರಗಳು ಪಾಲ್ಗೊಳ್ಳುತ್ತಿದ್ದು, 101 ಚಲನಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು.
ತ್ರಿವಿಕ್ರಮ ಸಪಲ್ಯ ರವರ ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣಗೊಂಡಿದ್ದು, ಈ ಚಿತ್ರವು ಇತ್ತೀಚೆಗೆ ಮುಂಬೈನಲ್ಲಿ ನಡೆದ ಮೂನ್ ವೈಟ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ಸೇರಿ ಒಟ್ಟು 4 ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ʼಮೃತ್ಯೋರ್ಮʼ ಚಿತ್ರವು ಈಗಾಗಲೇ ಅಮೇರಿಕ, ಯುರೋಪ್, ಕೀನ್ಯಾ ದೇಶಗಳ ಹಲವಾರು ಚಿತ್ರೋತ್ಸವಗಳಲ್ಲೂ ಪ್ರದರ್ಶನ ಕಂಡಿದೆ.