ಫೆಬ್ರವರಿ 9ರಂದು ತೆರೆ ಕಾಣಲಿದೆ `ನಗುವಿನ ಹೂಗಳ ಮೇಲೆʼ!

ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗೆ ಬರಲಿದೆ.;

Update: 2024-02-07 06:05 GMT
Click the Play button to listen to article

ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗೆ ಬರಲಿದೆ.

ಅಭಿದಾಸ್ ಮತ್ತು ಶರಣ್ಯಾ ಶೆಟ್ಟಿ ನಾಯಕ, ನಾಯಕಿಯರಾಗಿ ನಟಿಸಿರುವ ಈ ಚಿತ್ರ ಈಗಾಗಲೇ ಹಾಡುಗಳು, ಟ್ರೈರಲ್ ಸೇರಿದಂತೆ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಭಿನ್ನ ಪ್ರೇಮ ಕಥಾನಕದ ಭರವಸೆ ಮೂಡಿಸಿರುವ ʼನಗುವಿನ ಹೂಗಳ ಮೇಲೆʼ ಸಾಕಷ್ಟು ಹೊಸತನಗಳ ಪರಾಗ ಮೆತ್ತಿಕೊಂಡಂತಿದೆ.

ಈ ಹಿಂದೆ ಆಮ್ಲೆಟ್, ಕೆಂಪಿರ್ವೆ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವ ವೆಂಕಟ್ ಭಾರದ್ವಾಜ್ ಅವರು ʼನಗುವಿನ ಹೂಗಳ ಮೇಲೆʼ ಚಿತ್ರದ ಮೂಲಕ, ಎಲ್ಲ ವಯೋಮಾನದವರನ್ನೂ, ಎಲ್ಲ ತೆರನಾದ ಅಭಿರುಚಿಯ ಪ್ರೇಕ್ಷಕರನ್ನೂ ಅಚ್ಚರಿಗೀಡುಮಾಡಲು ಸಜ್ಜಾಗಿದ್ದಾರೆ.

ಕನ್ನಡ ಭಾಷೆ ಮೇಲಿನ ಅಭಿಮಾನದಿಂದಾಗಿ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್, ತಮ್ಮ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯ್ಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯ್ಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಅವರ ಸಾಹಸ ನಿರ್ದೇಶನವಿದೆ.

Tags:    

Similar News