ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಘೋಷಿಸಿದ ಸಾಯಿರಾ ಬಾನು
ಘಾಸಿಯಾದ ಹೃದಯದ ಭಾರದಿಂದ ದೇವರ ಸಿಂಹಾಸನವೂ ನಡುಗಬಹುದು. ಒಡೆದ ಕನ್ನಡಿ ಎಂದಿಗೂ ಒಂದಾಗಲು ಸಾಧ್ಯವಿಲ್ಲ. ನಾವು ಅತ್ಯಂತ ನೋವಿನ ಘಟ್ಟದಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ದಯೆ ನಮ್ಮ ಮೇಲಿರಲಿ ಎಂದು ಸಾಯಿರಾ ಟ್ವೀಟ್ ಮಾಡಿದ್ದಾರೆ.;
ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ 29 ವರ್ಷಗಳ ದಾಂಪತ್ಯ ಮುರಿದುಬಿದ್ದಿದೆ. ಎ.ಆರ್. ರೆಹಮಾನ್ ಹಾಗೂ ಪತ್ನಿ ಸಾಯಿರಾ ಬಾನು ಪರಸ್ಪರ ವಿಚ್ಛೇಧನ ಪಡೆಯವುದಾಗಿ ಘೋಷಿಸಿದ್ದಾರೆ.
2025 ಮಾರ್ಚ್ 12 ರಂದು ವಿವಾಹವಾಗಿದ್ದ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ.
ಸಂಗೀತ ಮಾಂತ್ರಿಕ ರೆಹಮಾನ್ ಅವರ ಪುತ್ರ ಎ.ಆರ್.ಅಮೀನ್ ಹಾಗೂ ಪುತ್ರಿಯರಾದ ಖತೀಜಾ ಮತ್ತು ರಹೀಮಾ ಕೂಡ ಪೋಷಕರ ವಿಚ್ಛೇದನದ ನೋವು ತೋಡಿಕೊಂಡಿದ್ದಾರೆ. ಪುತ್ರಿ ರಹೀಮಾ ತಮ್ಮ ತಂದೆಯ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪೋಷಕರು ಪರಸ್ಪರ ವಿಚ್ಛೇಧನ ಪಡೆಯುತ್ತಿರುವುದು ಅವರ ವೈಯಕ್ತಿಕ ವಿಚಾರ. ಈ ಸಮಯದಲ್ಲಿ ಕುಟುಂಬದ ಗೌಪ್ಯತೆಯನ್ನು ಎಲ್ಲರೂ ಗೌರವಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬರೂ ಕುಟುಂಬದ ಗೌಪ್ಯತೆ ಗೌರವಿಸಬೇಕೆಂದು ವಿನಂತಿಸುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದ ಎಂದು ಪುತ್ರ ಅಮೀನ ಕೂಡ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎ.ಆರ್ ರೆಹಮಾನ್ ಅವರು ನ. 19 ರಂದು ಪತ್ನಿ ಸಾಯಿರಾ ಅವರು ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದರು. ನಾವಿಬ್ಬರು 30ನೇ ವರ್ಷದ ದಾಂಪತ್ಯಕ್ಕೆ ಕಾಲಿಡುವ ಸಂದರ್ಭದಲ್ಲಿ ಬೇರೆ ಬೇರೆಯಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.
ಘಾಸಿಯಾದ ಹೃದಯದ ಭಾರದಿಂದ ದೇವರ ಸಿಂಹಾಸನವೂ ನಡುಗಬಹುದು. ಒಡೆದ ಕನ್ನಡಿ ಎಂದಿಗೂ ಒಂದಾಗಲು ಸಾಧ್ಯವಿಲ್ಲ. ನಾವು ಅತ್ಯಂತ ನೋವಿನ ಘಟ್ಟದಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ದಯೆ ನಮ್ಮ ಮೇಲಿರಲಿ. ನಮ್ಮ ಜೀವನದ ಗೌಪ್ಯತೆಯನ್ನು ಗೌರವಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತರಾಗಿರುವ ಎ.ಆರ್. ರೆಹಮಾನ್ ಅವರಿಗೆ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳಿದ್ದು, ಈಗ ದಾಂಪತ್ಯಕ್ಕೆ ಇತಿಶ್ರೀ ಹಾಡುತ್ತಿರುವುದು ಅಭಿಮಾನಿಗಳಲ್ಲಿ ನೋವು ತಂದಿದೆ.
ಇನ್ನು ವಿಚ್ಛೇಧನ ಕುರಿತಂತೆ ಸಾಯಿರಾ ಬಾನು ಪರ ವಕೀಲರು ಕೂಡ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿವಾಹವಾಗಿ ಹಲವು ವರ್ಷಗಳ ನಂತರ ಪತಿ ಎ.ಆರ್ ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ, ಭಾವನಾತ್ಮಕ ಒತ್ತಡ ಹಾಗೂ ಸಮಸ್ಯೆಗಳು ನಮ್ಮ ನಡುವೆ ಸಾಕಷ್ಟು ಅಂತರ ಸೃಷ್ಟಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
1995 ಜ.6 ರಂದು ಸಾಯಿರಾ ಬಾನು ಅವರನ್ನು ಚೆನ್ನೈನ ಸೂಫಿ ಮಂದಿರದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಸಾಯಿರಾ ಅವರ ಸೌಂದರ್ಯಕ್ಕೆ ರೆಹಮಾನ್ ಮನಸೋತಿದ್ದರು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಸುದೀರ್ಘ 29 ವರ್ಷಗಳ ದಾಂಪತ್ಯ ನಡೆಸಿದ ಅವರು ಈಗ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದಾರೆ.