ನಟಿ ಪೂಜಾ ಹೆಗ್ಡೆ ನಟನೆಯ 'ಕೂಲಿ' ಚಿತ್ರದ 'ಮೋನಿಕಾ' ಹಾಡಿಗೆ ಮೋನಿಕಾ ಬೆಲ್ಲುಸಿ ಮೆಚ್ಚುಗೆ

ಪೂಜಾ ಅವರು ಮೋನಿಕಾ ಬೆಲ್ಲುಸಿ ಅವರ ಐಕಾನಿಕ್ ಸ್ಟೈಲ್ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ನನಗೆ ಮೊದಲಿನಿಂದಲೂ ಮೋನಿಕಾ ಬೆಲ್ಲುಸಿ ಅಂದ್ರೆ ತುಂಬಾ ಇಷ್ಟ. ಅವರ ವ್ಯಕ್ತಿತ್ವವೇ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ.;

Update: 2025-08-12 05:25 GMT

'ಕೂಲಿ' ಚಿತ್ರದಲ್ಲಿನ ಹಾಡಿನಿಂದ ಮೋನಿಕಾ ಬೆಲ್ಲುಸಿ ಗಮನ ಸೆಳೆದ ಪೂಜಾ ಹೆಗ್ಡೆ

ಲೊಕೇಶ್ ಕನಕರಾಜ್ ನಿರ್ದೇಶನದ ಹಾಗೂ ರಜನಿಕಾಂತ್ ನಟನೆಯ 'ಕೂಲಿ' ತಮಿಳು ಚಿತ್ರದ 'ಮೋನಿಕಾ' ಹಾಡಿಗೆ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇದೀಗ ಹಾಲಿವುಡ್‌ ಹಿರಿಯ ನಟಿ ಮೋನಿಕಾ ಬೆಲ್ಲುಸಿ ( Monica Bellucci ) ಅವರ ಗಮನ ಸೆಳೆದಿದೆ.

ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪೂಜಾ ಹೆಗ್ಡೆ"ಓಹ್, ನಿಜವಾಗಲೂ? ವಾಹ್. ಇದು ನನಗೆ ಸಿಕ್ಕ ಅತಿ ದೊಡ್ಡ ಮೆಚ್ಚುಗೆ. ಇದು ಒಂದು ದೊಡ್ಡ ಸಾಧನೆ. ನನಗೆ ತುಂಬಾ ಸಂತೋಷವಾಗಿದೆ. ಅವರಿಗೆ ಈ ಹಾಡು ಇಷ್ಟವಾಗಿದ್ದಕ್ಕೆ ನನಗೆ ಖುಷಿಯಾಗಿದೆ" ಎಂದು ಪೂಜಾ ಹೇಳಿಕೊಂಡಿದ್ದಾರೆ.

ಪೂಜಾ ಅವರು ಮೋನಿಕಾ ಬೆಲ್ಲುಸಿ ಅವರ ಐಕಾನಿಕ್ ಸ್ಟೈಲ್ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ನನಗೆ ಮೊದಲಿನಿಂದಲೂ ಮೋನಿಕಾ ಬೆಲ್ಲುಸಿ ಅಂದ್ರೆ ತುಂಬಾ ಇಷ್ಟ. ಅವರ ವ್ಯಕ್ತಿತ್ವವೇ ಅದ್ಭುತವಾಗಿದೆ. ಅವರು ನಿಜವಾಗಿಯೂ ತುಂಬಾ ಐಕಾನಿಕ್" ಎಂದು ತಿಳಿಸಿದ್ದರು.

Full View

'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗೆ ಪ್ರತಿಕ್ರಿಯಿಸಿರುವ ಪೂಜಾ, ʻಹಾಡನ್ನು ಜನಪ್ರಿಯಗೊಳಿಸುವಲ್ಲಿ ಅಭಿಮಾನಿಗಳ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಬಹಳಷ್ಟು ಜನರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ದಯವಿಟ್ಟು ಕೂಲಿ ಹಾಡನ್ನು ನೋಡಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಪ್ರಯತ್ನದಿಂದ ಮೋನಿಕಾ ಬೆಲ್ಲುಸಿ ಅವರನ್ನು ಸಂಪರ್ಕಿಸಲು ಸಾಧ್ಯವಾಗಿದೆ ಎಂದು ಪೂಜಾ ಹೇಳಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ತಮಿಳು ಚಿತ್ರಗಳಲ್ಲಿ 'ಕೂಲಿ' ಕೂಡ ಒಂದಾಗಿದ್ದು, ಇದು ಆಕ್ಷನ್-ಪ್ಯಾಕ್ಡ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ, 'ಮೋನಿಕಾ' ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಅವರು ನಿರ್ದೇಶಕರ ಬಗ್ಗೆ ಮಾತನಾಡುತ್ತಾ, ʻʻಅವರಂತಹ ನಿರ್ದೇಶಕರು ಈ ಹಾಡಿಗೆ ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಸಂತಸ ತಂದಿದೆʼʼ ಎಂದು ಅವರು ತಿಳಿಸಿದರು. 

'ಕೂಲಿ' ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಇದೇ ದಿನ ಬಿಡುಗಡೆಯಾಗಲಿರುವ 'ವಾರ್ 2' ಜೊತೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧಿಸಲಿದೆ. 

Tags:    

Similar News