BANGALORE WATER CRISIS | ಸಮಸ್ಯೆಗೆ ಕನ್ನಡದಲ್ಲೇ ಪರಿಹಾರ ಸೂಚಿಸಿದ ಮೆಗಾಸ್ಟಾರ್

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ನೀರಿನ ಮಹತ್ವ ಸಾರುವ ಪ್ರಯತ್ನವನ್ನು ಮಾಡಿದ್ದಾರೆ. ಅದು ಕನ್ನಡದಲ್ಲಿಯೇ ಅನ್ನುವುದು ವಿಶೇಷ.;

Update: 2024-03-27 12:48 GMT
ನೀರಿನ ಸಮಸ್ಯೆಗೆ ಕನ್ನಡದಲ್ಲಿಯೇ ಪರಿಹಾರ ತಿಳಿಸಿದ ಮೆಗಾಸ್ಟಾರ್‌ ಚಿರಂಜೀವಿ.
Click the Play button to listen to article

ಬೆಂಗಳೂರಿನಲ್ಲಿ ಈಗ ಎಲ್ಲೆಲ್ಲೂ ನೀರಿನ ಸಮಸ್ಯೆಯದ್ದೇ ಮಾತು. ಉದ್ಯಾನನಗರಿಯ ಈ ಕೂಗಿಗೆ ಈಗ ನೆರೆಯ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಕೂಡ ದನಿ ಗೂಡಿಸಿದ್ದಾರೆ! ಅದೂ ಕನ್ನಡದಲ್ಲಿಯೇ ನೀರಿನ ಮಹತ್ವದ ಕುರಿತು ಮಾತನಾಡುವ ಮೂಲಕ ಚಿರಂಜೀವಿ ಕಾಳಜಿ ಮೆರೆದಿದ್ದಾರೆ!

ನೀರಿನ ಬಗ್ಗೆ ಮೆಗಾ ಸ್ಟಾರ್ ಮನದ ಮಾತು..! ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ ಬಹಳ ಮುಖ್ಯ ಎಂದಿರುವ ಮೆಗಾ ಸ್ಟಾರ್, "ನಮಗೆಲ್ಲರಿಗೂ ತಿಳಿದಿರುವಂತೆ ನೀರು ಅತ್ಯಂತ ಅಮೂಲ್ಯವಾದ ವಸ್ತು. ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರ ಆಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು. ಆದ್ದರಿಂದ ನೀರು ಉಳಿಸುವ ತಂತ್ರಜ್ಞಾನದ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ" ಎಂದಿದ್ದಾರೆ.

"ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 20x36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ತೋಟದ ಆಯಕಟ್ಟಿನ ಬಿಂದುಗಳಲ್ಲಿ ಸ್ಥಾಪಿಸಲಾಗಿದ್ದು, ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವು ಕೂಡಿಸಲು ಸಾಕಷ್ಟು ಇಳಿಜಾರುಗಳಿವೆ. ಪ್ರತಿಯೊಂದು ಬಾವಿಯು ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ. ವಿವಿಧ ಸಮುಚ್ಚಯಗಳೊಂದಿಗೆ ಒಂದು ಹೂಳು ಬಲೆ, ಅಂದರೆ ಕಲ್ಲು ಮತ್ತು ಮರಳು ಪದರಗಳ ಮೂಲಕ ನೀರಿನ ಹರಿವು ಮತ್ತು ಫಿಲ್ಟರ್‌ ವ್ಯವಸ್ಥೆ ಮಾಡಲಾಗಿದೆ. ರೀಚಾರ್ಜ್ ಪಿಟ್‌ಗೆ ಹೋಲಿಸಿದರೆ ರೀಚಾರ್ಜ್ ಬಾವಿಯಲ್ಲಿ ಹೆಚ್ಚು ನೀರನ್ನು ಸಂಗ್ರಹಿಸಬಹುದು ಮತ್ತು ಹೆಚ್ಚು ಆಳದ ಜಲಮೂಲ ತಲುಪಲು ಅನುಕೂಲರ" ಎಂಬುದನ್ನು ಕನ್ನಡದಲ್ಲಿ ವಿವರಿಸಿದ್ದಾರೆ ಚಿರಂಜೀವಿ.

ಇನ್ನು ನಾನು ಪರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಪರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಭೂಮಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಪರ್ಮಾಕಲ್ಚರ್‌ನ ಪ್ರಮುಖ ಫಲಿತಾಂಶವೆಂದರೆ ನೀರಿನ ಅಗತ್ಯದ ಕಡಿತ. ಮಣ್ಣಿನಿಂದ ಬಾಷ್ಪೀಕರಣ ಹೊಂದುವ ನೀರಿನ ಪ್ರಮಾಣದ ನಷ್ಟವನ್ನು ಕಡಿಮೆ ಮಾಡುವ ತೋಟವನ್ನು ಬಳಸಿಕೊಂಡು ಸೂಕ್ತವಾದ ನೆಲದ ಹೊದಿಕೆಯೊಂದಿಗೆ ಸತ್ತ ಎಲೆ ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ.

ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು. ಆ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಚಿರಂಜಿವಿ ವ್ಯಕ್ತಪಡಿಸಿದ್ದಾರೆ.

Tags:    

Similar News