ಮದುವೆ ಅಲ್ಲ.. ಜೆಸ್ಟ್‌ ಎಂಗೇಜ್‌ಮೆಂಟ್‌: ಕ್ಲಾರಿಫಿಕೇಶನ್‌ ಕೊಟ್ಟ ಅದಿತಿ ಹೈದರಿ

ಅದಿತಿ ರಾವ್ ಹೈದಿರಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ತಾವು ಹಾಗೂ ಸಿದ್ಧಾರ್ಥ್ ಮದುವೆಯಾಗಿಲ್ಲ; ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.;

Update: 2024-03-28 14:19 GMT
ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಜೋಡಿ

ತಮಿಳು ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಮಾರ್ಚ್ 27ರಂದು ದೇವಾಲಯವೊಂದರಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅದಿತಿ ರಾವ್ ಹೈದಿರಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ತಾವು ಹಾಗೂ ಸಿದ್ಧಾರ್ಥ್ ಮದುವೆಯಾಗಿಲ್ಲ; ಅಂದು ನಡೆದದ್ದು ನಿಶ್ಚಿತಾರ್ಥ ಎಂದು ಹೇಳಿದ್ದಾರೆ.

ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಅವರುಗಳು ತೆಲಂಗಾಣದ ವನಪರ್ತಿಯ ರಂಗನಾಥಸ್ವಾಮಿ ದೇವಾಲಯದಲ್ಲಿ ಗುಟ್ಟಾಗಿ ಮದುಗೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ದೇವಾಲಯದ ಸಿಬ್ಬಂದಿ ಸಹ ಆ ಇಬ್ಬರೂ ಇಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಖಾತ್ರಿಪಡಿಸಿದ್ದರು. ಅಲ್ಲದೆ, ಚಿತ್ರೀಕರಣ ಎಂದು ಹೇಳಿ ಮದುವೆ ಆಗಿದ್ದಾರೆ ಎಂಬ ಆರೋಪವನ್ನು ಸಹ ಮಾಡಿದ್ದರು.

ಇದೀಗ ಅದಿತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಸಿದ್ಧಾರ್ಥ್​ನ ಚಿತ್ರ ಹಂಚಿಕೊಂಡು, ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅದಿತಿ ಹಂಚಿಕೊಂಡಿರುವ ಚಿತ್ರದಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರೂ ಬೆರಳಿಗೆ ಉಂಗುರ ಹಾಕಿಕೊಂಡಿದ್ದಾರೆ. 'He said yes!

E. N. G. A. G. E. D. ' ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಅದಿತಿ ಹಂಚಿಕೊಂಡಿದ್ದಾರೆ. ಅಲ್ಲಿಗೆ ತಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಖಾತ್ರಿ ಪಡಿಸಿದ್ದಾರೆ.

Full View

ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ 'ಮಹಾ ಸಮುದ್ರಂ' ಚಿತ್ರದ ಮೂಲಕ ಪರಿಚಯವಾದರು. ಈ ವೇಳೆ ಅವರಿಬ್ಬರ ನಡುವೆ ಸ್ನೇಹವಾಗಿತ್ತು, ಸ್ನೇಹ ಪ್ರಿತಿಯಾಗಿ ತಿರುಗಿತ್ತು. ಅಂದಿನಿಂದ ಈ ಜೋಡಿ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ತಮ್ಮ ಡೇಟಿಂಗ್‌ ಸಿಕ್ರೇಟ್‌ ರಿವೀಲ್‌ ಮಾಡಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Tags:    

Similar News