ದಾಖಲೆ ಬರೆದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಮಹಾವತಾರ ನರಸಿಂಹ' ಅನಿಮೇಷನ್ ಸಿನಿಮಾ

ಕರ್ನಾಟಕದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇಂದು ವಿಶ್ವಾದ್ಯಂತ ಭಾರತೀಯ ಸಿನಿಮಾದ ಹೊಸ ಶಕ್ತಿಯಾಗಿ ಗುರುತಿಸಿಕೊಂಡಿದೆ.;

Update: 2025-08-02 11:55 GMT

ಮಹಾವತಾರ ನರಸಿಂಹ

ಕನ್ನಡ ಚಿತ್ರರಂಗದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಅನಿಮೇಷನ್ ಚಿತ್ರ 'ಮಹಾವತಾರ ನರಸಿಂಹ' ಭಾರತದಲ್ಲೇ ಅತಿ ಹೆಚ್ಚು ಗಳಿಸಿದ ಅನಿಮೇಷನ್ ಚಲನಚಿತ್ರ ಎಂಬ ಇತಿಹಾಸ ಬರೆದಿದೆ.

ಈ ಸಿನಿಮಾವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿರುವ ಈ ಸಿನಿಮಾ  ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿ 21.8 ಕೋಟಿ ರೂ.ಗಳಿಸಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. 

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹುಟ್ಟಿದ್ದು ಕರ್ನಾಟಕದಲ್ಲಿ. 'ರಾಜಕುಮಾರ' ಚಿತ್ರದ ಮೂಲಕ ಯಶಸ್ಸು ಗಳಿಸಿದ ಈ ಸಂಸ್ಥೆ, ಕೌಟುಂಬಿಕ ಮೌಲ್ಯಗಳು, ಸಂಪ್ರದಾಯ ಮತ್ತು ಭಾವನಾತ್ಮಕ ಕಥೆಗಳಿಗೆ ಒತ್ತು ನೀಡುತ್ತಲೇ, ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಕರ್ನಾಟಕದ ಈ ಸಂಸ್ಥೆ ಇಂದು ವಿಶ್ವಾದ್ಯಂತ ಭಾರತೀಯ ಸಿನಿಮಾದ ಹೊಸ ಶಕ್ತಿಯಾಗಿ ಗುರುತಿಸಿಕೊಂಡಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಗಳು 

* 'ಕೆಜಿಎಫ್' ಮತ್ತು 'ಸಲಾರ್' ಸಿನಿಮಾ

* 'ಕಾಂತಾರ' 

* 'ಮಹಾವತಾರ ನರಸಿಂಹ' 

ಇವು ಕೇವಲ ಚಲನಚಿತ್ರಗಳಲ್ಲ. ಇದು ಭಾರತೀಯ ಕಥೆಗಳ ನಿರೂಪಣಾ ಶೈಲಿಯನ್ನು ಬದಲಿಸಿದ ಒಂದು ಅಭೂತಪೂರ್ವ ಪ್ರಯೋಗ. ಪ್ರತಿ ಹೆಜ್ಜೆಯಲ್ಲೂ ಹೊಂಬಾಳೆ ಫಿಲ್ಮ್ಸ್ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಇದು ಕರ್ನಾಟಕದ ಹೆಮ್ಮೆಯನ್ನು ಹೆಮ್ಮೆಯಿಂದ ಹೊತ್ತು, ಭಾರತೀಯ ಸಿನಿಮಾವನ್ನು ಹೊಸ ಪಥದತ್ತ ಕೊಂಡೊಯ್ಯುತ್ತಿದೆ. ಇದು ಕೇವಲ ಯಶಸ್ಸಲ್ಲ, ಇದು ನಮ್ಮ ಸಂಸ್ಕೃತಿಯನ್ನು ಆಚರಿಸುತ್ತಿರುವ ಒಂದು ಚಲನಶೀಲ ಪರಂಪರೆ.

 ಮಹಾವತಾರ ನರಸಿಂಹ ಸಿನಿಮಾದ ಬಗ್ಗೆ 

ಈ ಚಿತ್ರವು ವಿಷ್ಣುವಿನ ಕಟ್ಟಾ ಭಕ್ತ ಪ್ರಹ್ಲಾದನ ಜನಪ್ರಿಯ ಪೌರಾಣಿಕ ಕಥೆಯ ಸುತ್ತ ಸುತ್ತುತ್ತದೆ. ವಿಷ್ಣುವಿನ ಅನೇಕ ದೈವಿಕ ಅವತಾರಗಳನ್ನು ಈ ಸಿನಿಮಾ ನಿರೂಪಿಸಲಿದೆ. ಜುಲೈ 25ರಂದು  ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

Tags:    

Similar News