ʼದ ಡೆವಿಲ್‌ʼ ಚಿತ್ರದ ಮೂರನೇ ಹಾಡು ಬಿಡುಗಡೆ; ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಯ್ತು ʼಅಲೊಹೊಮೊರಾʼ

ರಿಯಲ್ ಡೆವಿಲ್ ಅವತಾರದಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದು, ಹಿನ್ನೆಲೆ ಸಂಗೀತ ಮತ್ತು ಆಕ್ಷನ್ ಗ್ಲಿಂಪ್ಸ್‌ಗಳು ಗಮನ ಸೆಳೆಯುತ್ತಿವೆ. ಹಾಡಿನ ಸಾಹಿತ್ಯದಲ್ಲಿ ಡಾರ್ಕ್ ಮಿಸ್ಟಿಕ್ ಥೀಮ್ ಅಳವಡಿಸಲಾಗಿದೆ.

Update: 2025-11-16 08:39 GMT

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದ ಡೆವಿಲ್’ ಚಿತ್ರದ ಮೂರನೇ ಹಾಡು ‘ಅಲೊಹೊಮೊರಾ- ದಿ ಟೂ ಎಂಪರರ್’ ಭಾನುವಾರ ಬಿಡುಗಡೆಯಾಗಿದೆ.

ಇದಕ್ಕೂ ಮೊದಲು ಬಿಡುಗಡೆಯಾದ ‘ಇದ್ರೆ ನೆಮ್ಮಿಯಾಗಿರ್ಬೇಕ್’ ಮತ್ತು ‘ಒಂದೇ ಒಂದು ಸಲ’ ಹಾಡುಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಈಗ ದರ್ಶನ್‌ ಮಾಸ್‌ ಲುಕ್‌ನಲ್ಲಿ ಕಾಣುವ ಅಲೆಹೊಮೊರಾ ಹಾಡು ಅಭಿಮಾನಿಗಳ ಮನೆ ಗೆದ್ದಿದೆ.

ರಿಯಲ್ ಡೆವಿಲ್ ಅವತಾರದಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದು, ಹಿನ್ನೆಲೆ ಸಂಗೀತ ಮತ್ತು ಆಕ್ಷನ್ ಗ್ಲಿಂಪ್ಸ್‌ಗಳು ಗಮನ ಸೆಳೆಯುತ್ತಿವೆ. ಹಾಡಿನ ಸಾಹಿತ್ಯದಲ್ಲಿ ಡಾರ್ಕ್ ಮಿಸ್ಟಿಕ್ ಥೀಮ್ ಅಳವಡಿಸಲಾಗಿದೆ. “ಡೌಟೇ ಬೇಡ, ಸೈತಾನ ದೇವರೆ… ಅಸ್ತಲವಿಸ್ತ…”, “ಕಲಿ ಯಾರು ಹೇಳಲೇ…” ಎಂಬ ಸಾಲುಗಳು ಪ್ರೇಕ್ಷಕರಲ್ಲಿ ಹೊಸ ಚರ್ಚೆಯನ್ನೂ ಹುಟ್ಟು ಹಾಕುತ್ತಿವೆ.

ಚಿತ್ರದ ನಾಯಕಿ ರಚನಾ ರೈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಹಾಡಿನ ಪ್ರೋಮೋದಲ್ಲಿ ಅವರ ಸನ್ನಿವೇಶಗಳು ಹಾಗೂ ದೃಶ್ಯ ವಿನ್ಯಾಸ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

Full View

ಚಿತ್ರತಂಡದ ಪ್ರಕಾರ, ‘ಅಲೊಹೊಮೊರಾ’ ಹಾಡು ಸಿನಿಮಾದ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಸಿದೆ. ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ದಾಖಲಿಸಿದೆ.

‘ದ ಡೆವಿಲ್’ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಘೋಷಿಸುವ ನಿರೀಕ್ಷೆಯಿದೆ.

Tags:    

Similar News