ಆಸ್ಕರ್ ರೇಸ್ನಿಂದ 'ಲಾಪತಾ ಲೇಡಿಸ್'' ಹೊರಕ್ಕೆ; ಚಿತ್ರ ತಂಡಕ್ಕೆ ನಿರಾಸೆ
ಈ ಚಿತ್ರ 15 ವೈಶಿಷ್ಟ್ಯಗಳ ಅಂತಿಮ ಪಟ್ಟಿಯ ಭಾಗವಾಗಿಲ್ಲ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಎಎಂಪಿಎಎಸ್) ಬುಧವಾರ ಬೆಳಗ್ಗೆ ಹೇಳಿದೆ.
97ನೇ ಆಸ್ಕರ್ ಪ್ರಶಸ್ತಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದಿಂದ ಪ್ರವೇಶ ಪಡೆದಿದ್ದ ಕಿರಣ್ ರಾವ್ ನಿರ್ದೇಶನದ 'ಪಾ ಪತಾ ಲೇಡೀಸ್' ಇದೀಗ ಅಂತಿಮ ಪಟ್ಟಿಗೆ ಸೇರ್ಪಡೆಗೊಳ್ಳಲು ವಿಫಲವಾಗಿದೆ. ಈ ಮೂಲಕ ಸಿನಿಮಾ ತಂಡಕ್ಕೆ ಹಾಗೂ ಅಸಂಖ್ಯಾತ ಭಾರತೀಯ ಸಿನಿಮಾ ಪ್ರೇಮಿಗಳಿಗೆ ನಿರಾಸೆಯಾಗಿದೆ.
ಕಿರಣ್ ರಾವ್ ನಿರ್ದೇಶನದ ಹಿಂದಿ ಚಿತ್ರವು ಅಂತಿಮ ಐದರಲ್ಲಿ ಸ್ಥಾನ ಪಡೆಯಲು ವಿಫಲಗೊಂಡಿದೆ. ಈ ಚಿತ್ರ 15 ವೈಶಿಷ್ಟ್ಯಗಳ ಅಂತಿಮ ಪಟ್ಟಿಯ ಭಾಗವಾಗಿಲ್ಲ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಎಎಂಪಿಎಎಸ್) ಬುಧವಾರ ಬೆಳಗ್ಗೆ ಹೇಳಿದೆ. ಏತನ್ಮಧ್ಯೆ, ಭಾರತ ಮೂಲದ ಬ್ರಿಟಿಷ್ ಚಲನಚಿತ್ರ ನಿರ್ಮಾಪಕಿ ಸಂಧ್ಯಾ ಸೂರಿ ಅವರ "ಸಂತೋಷ್" ಚಿತ್ರ ಅಂತಿಮ ಪಟ್ಟಿಯಲ್ಲಿ ಅವಕಾಶ ಪಡೆದಿದೆ. ಇದರಲ್ಲಿ ಯುಕೆಯನ್ನು ಪ್ರತಿನಿಧಿಸುವ ಭಾರತೀಯ ನಟರಾದ ಶಹಾನಾ ಗೋಸ್ವಾಮಿ ಮತ್ತು ಸುನೀತಾ ರಾಜ್ವರ್ ನಟಿಸಿದ್ದಾರೆ. ಈ ಪಟ್ಟಿಯಲ್ಲಿ "ಎಮಿಲಿಯಾ ಪೆರೆಜ್", "ಐ ಆಮ್ ಸ್ಟಿಲ್ ಹಿಯರ್" (ಬ್ರೆಜಿಲ್), "ಯುನಿವರ್ಸಲ್ ಲಾಂಗ್ವೇಜ್" (ಕೆನಡಾ), "ವೇವ್ಸ್" (ಜೆಕ್ ಗಣರಾಜ್ಯ), "ದಿ ಗರ್ಲ್ ವಿತ್ ದಿ ನೀಡಲ್ " (ಡೆನ್ಮಾರ್ಕ್) ಮತ್ತು ಜರ್ಮನಿಯ "ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್" ಸಿನಿಮಾಗಳಿವೆ.
"ಟಚ್" (ಐಸ್ಲ್ಯಾಂಡ್), " ನೀಕ್ಯಾಪ್" (ಐರ್ಲೆಂಡ್), "ವರ್ಮಿಗ್ಲಿಯೊ" (ಇಟಲಿ), "ಫ್ಲೋ" (ಲಾಟ್ವಿಯಾ), "ಅರ್ಮಾಂಡ್" (ನಾರ್ವೆ), "ಫ್ರಮ್ ಗ್ರೌಂಡ್ ಝೀರೋ" (ಪ್ಯಾಲೆಸ್ತೀನ್), "ದಹೋಮಿ" (ಸೆನೆಗಲ್) ಮತ್ತು "ಹೌ ಟು ಮೇಕ್ ಮಿಲಿಯನ್ ಬಿಪೋರ್ ಗ್ರಾಂಡ್ಮಾ ಡೈಸ್ಸ್ " (ಥೈಲ್ಯಾಂಡ್) ಈ ವಿಭಾಗದಲ್ಲಿನ ಇತರ ಸ್ಪರ್ಧಿಗಳು.
ಅಂತಿಮ ಆಸ್ಕರ್ ನಾಮನಿರ್ದೇಶನಗಳನ್ನು ಜನವರಿ 17 ರಂದು ಪ್ರಕಟಗೊಳ್ಳಲಿದೆ. ಅಕಾಡೆಮಿಯ ,ಮಾಹಿತಿ ಪ್ರಕಾರ , 85 ದೇಶಗಳು ಮತ್ತು ಪ್ರಾಂತ್ಯಗಳು 97 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದವು.
ಸಂಧ್ಯಾ ಸೂರಿ ನಿರ್ದೇಶನದ 'ಸಂತೋಷ್' ಚಿತ್ರವು ನವ ವಿವಾಹಿತೆ ವಿಧವೆಯಾಗುವ (ಗೋಸ್ವಾಮಿ) ಕತೆಯ ಸುತ್ತ ಸುತ್ತುತ್ತದೆ. ಆಕೆ ತನ್ನ ಪತಿಯ ಪೊಲೀಸ್ ಕಾನ್ಸ್ಟೇಬಲ್ ಕೆಲಸವನ್ನು ಅನುಕಂಪದಿಂದ ಪಡೆಯುತ್ತಾಳೆ. ಹಾಗೂ ಯುವತಿಯೊಬ್ಬಳ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಾರೆ.
ಲಾಪತಾ ಲೇಡಿಸ್ಗೆ ನಿರಾಸೆ
ಕಿರಣ್ ರಾವ್ ನಿರ್ದೇಶನದ "ಲಪತಾ ಲೇಡೀಸ್" (ಇಂಗ್ಲಿಷ್ನಲ್ಲಿ "ಲಾಸ್ಟ್ ಲೇಡೀಸ್") 2000ರ ದಶಕದ ಆರಂಭದಲ್ಲಿ ಗ್ರಾಮೀಣ ಭಾರತದಲ್ಲಿ ನಡೆಯುವ ಕತೆಯಾಗಿದೆ. ಬಿಪ್ಲಬ್ ಗೋಸ್ವಾಮಿ ಅವರ ಕಥೆಯನ್ನು ಆಧರಿಸಿದ "ಈ ಚಿತ್ರಕ್ಕೆ ಸ್ನೇಹಾ ದೇಸಾಯಿ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ದಿವ್ಯನಿಧಿ ಶರ್ಮಾ ಹೆಚ್ಚುವರಿ ಸಂಭಾಷಣೆಗಳನ್ನು ಬರೆದಿದ್ದಾರೆ. ಇದು ಭಾರತದಲ್ಲಿ ಸಿನಿಮಾ ವಿಶ್ಲೇಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಹೀಗಾಗಿ ಆಸ್ಕರ್ ಭರವಸೆ ಮೂಡಿಸಿತ್ತು.
ಛಾಯಾ ಕದಮ್, ರವಿ ಕಿಶನ್ ಮತ್ತು ಗೀತಾ ಅಗರ್ವಾಲ್ ಶರ್ಮಾ ಕೂಡ ಇದರ ಪಾತ್ರವರ್ಗದಲ್ಲಿದ್ದಾರೆ.
2023ರ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (ಟಿಐಎಫ್ಎಫ್) ನಲ್ಲಿ ವಿಶ್ವ ಪ್ರಥಮ ಪ್ರದರ್ಶನ ಕಂಡ "ಲಪತಾ ಲೇಡೀಸ್" ಮಾರ್ಚ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ರಾವ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್, ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಜಿಯೋ ಸ್ಟುಡಿಯೋಸ್ ಸಿನಿಮಾಕ್ಕೆ ಬೆಂಬಲವಾಗಿ ನಿಂತಿದ್ದರು.
ಸೆಪ್ಟೆಂಬರ್ನಲ್ಲಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್ಎಫ್ಐ) ಈ ಸಿನಿಮಾವನ್ನು ಆಸ್ಕರ್ಗೆ ಕಳುಹಿಸಲು ಆಯ್ಕೆ ಮಾಡಿತ್ತು. ಬಾಲಿವುಡ್ ಹಿಟ್ "ಅನಿಮಲ್", ಮಲಯಾಳಂ ರಾಷ್ಟ್ರ ಪ್ರಶಸ್ತಿ ವಿಜೇತ "ಆಟಂ" ಮತ್ತು ಕ್ಯಾನ್ಸ್ ಪ್ರಶಸ್ತಿ ವಿಜೇತ "ಆಲ್ ವಿ ಇಮ್ಯಾಜಿನ್ ಆಸ್ ಲೈಟ್" ಸೇರಿದಂತೆ 29 ಚಿತ್ರಗಳ ಪಟ್ಟಿಯಲ್ಲಿ ಲಾಪತಾ ಲೇಡಿಸ್ ಗೆದ್ದಿತ್ತು.
ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ನಡೆದ ಕತೆಯ "ಲಗಾನ್" 2002ರ ಆಸ್ಕರ್ ನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಅಗ್ರ ಐದು ನಾಮನಿರ್ದೇಶನದ ಮೂಲಕ ಪ್ರವೇಶಿಸಿದ ಕೊನೆಯ ಭಾರತೀಯ ಚಲನಚಿತ್ರವಾಗಿದೆ.
ನರ್ಗಿಸ್ ಅಭಿನಯದ 'ಮದರ್ ಇಂಡಿಯಾ' ಮತ್ತು ಮೀರಾ ನಾಯರ್ ಅವರ 'ಸಲಾಮ್ ಬಾಂಬೆ' ಚಿತ್ರಗಳು ಮಾತ್ರ ಈ ಹಿಂದೆ ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದವು. ಕಳೆದ ವರ್ಷ, ಎಸ್.ಎಸ್.ರಾಜಮೌಳಿ ಅವರ ತೆಲುಗು ಅವಧಿಯ ಆಕ್ಷನ್ ಚಿತ್ರ "ಆರ್ಆರ್ಆರ್ನ" ನ "ನಾಟು ನಾಟು" ಅತ್ಯುತ್ತಮ ಹಾಡಿನ ವಿಭಾಗದಲ್ಲಿ ಪ್ರಶಸ್ತಿ ಗದ್ದಿತ್ತು.