Bigg Boss Kannada | ಕೊನೆಗೂ ವಿದಾಯ ಘೋಷಿಸಿದ ಕಿಚ್ಚ ಸುದೀಪ್‌

ಬಹಳ ದಿನಗಳ ಚರ್ಚೆ, ವದಂತಿ, ಅಭಿಮಾನಿಗಳ ವಾಗ್ವಾದದ ಬಳಿಕ ಕೊನೆಗೂ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ನಿರೂಪಣೆಗೆ ಗುಡ್‌ ಬೈ ಹೇಳುವ ನಿರ್ಧಾರ ಪ್ರಕಟಿಸಿದ್ದಾರೆ;

Update: 2024-10-14 06:31 GMT
ಕಿಚ್ಚ ಸುದೀಪ್‌
Click the Play button to listen to article

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ನಿರೂಪಕ ಸ್ಥಾನಕ್ಕೆ ವಿದಾಯ ಘೋಷಿಸಿದ್ದಾರೆ.

ಪ್ರಸ್ತುತ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ನಡೆಸಿಕೊಡುತ್ತಿದ್ದಾರೆ. ಆದರೆ ಮುಂದಿನ ಸೀಸನ್​ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿಯೇ ಈ ನಿರ್ಧಾರ ತಿಳಿಸಿದ್ದಾರೆ. 

ಬಹಳ ದಿನಗಳ ಚರ್ಚೆ, ವದಂತಿ, ಅಭಿಮಾನಿಗಳ ವಾಗ್ವಾದದ ಬಳಿಕ ಕೊನೆಗೂ ಕಿಚ್ಚ ಸುದೀಪ್‌, ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ನಿರೂಪಣೆಗೆ ಗುಡ್‌ ಬೈ ಹೇಳುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್​ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

‘ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್​ ಬಾಸ್​. ಇಷ್ಟು ವರ್ಷಗಳ ಕಾಲ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್​ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ಮನರಂಜಿಸುತ್ತೇನೆ’ ಎಂದು ಸುದೀಪ್​ ಅವರು ತಿಳಿಸಿದ್ದಾರೆ. 

ಬಿಗ್​ಬಾಸ್​ 9.9. ಟಿವಿಆರ್​ ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚು ರೇಟಿಂಗ್​ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ಅವರು ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೇಕ್​ ಕಟ್​ ಮಾಡುವ ಮೂಲಕ ಬಿಗ್​ಬಾಸ್​ ತಂಡವು ಇದನ್ನು ಸೆಲೆಬ್ರೇಟ್​ ಮಾಡಿದೆ. ಸುದೀಪ್‌  ಪೋಸ್ಟ್ ಗೆ ಎಲ್ಲರೂ ಹೃದಯ ಛಿದ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ನೀವಿಲ್ಲದೆ ಬಿಗ್‌ಬಾಸ್ ಇಲ್ಲ ಅಣ್ಣ, ಕಿಚ್ಚನಿಲ್ಲದೆ ಬಿಗ್‌ಬಾಸ್‌ ಇಲ್ಲ, ಗೋಲ್ಡನ್ ಇರಾ ಎಂಡ್‌ ಆಯ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೆ ಕೆಲವರು ಒಳ್ಳೆಯ ನಿರ್ಧಾರ ಕೈಗೊಂಡಿದ್ದೀರಿ. ಇನ್ನು ಮುಂದೆ ಸಿನಿಮಾ ಕಡೆ ಗಮನ ಹರಿಸಿ, ವರ್ಷಕ್ಕೆ ಕನಿಷ್ಟ ಎರಡು ಸಿನಿಮಾವನ್ನಾದರೂ ಕೊಡಿ ಎಂದು ಹೇಳಿದ್ದಾರೆ. ಮತ್ತೆ ಕೆಲವರು ನಿಮ್ಮ ನಿರ್ಧಾರದಿಂದ ನಿಮ್ಮ ಅಭಿನಯ, ಸಿನಿಮಾದ ಅಭಿಮಾನಿಗಳಿಗೆ ಖುಷಿಯಾಗಿದೆ. ಆಲ್‌ ದ ಬೆಸ್ಟ್‌ ಎಂದೂ ಹೇಳಿದ್ದಾರೆ.

ಕಿಚ್ಚ ಸುದೀಪ್‌ ಅವರ ನಟನೆಯ ಕನ್ನಡ ಸಿನಿಮಾ ತೆರೆಗೆ ಬರದೇ ಬಹುತೇಕ ಎರಡೂವರೆ ವರ್ಷ ಕಳೆದಿದೆ. ಆ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅವರ ಬರಲಿರುವ ಸಿನಿಮಾ ʼಮ್ಯಾಕ್ಸ್‌ʼ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಸುದೀಪ್‌ ಅವರು ರಿಯಾಲಿಟಿ ಶೋ ಬಿಗ್‌ ಬಾಸ್‌ ಮತ್ತು ಕ್ರಿಕೆಟ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಸಿನಿಮಾವನ್ನು ನಿರ್ಲಕ್ಷಿಸಿದ್ದಾರೆ ಎಂಬ ವ್ಯಾಪಕ ಅಸಮಾಧಾನ ಕೂಡ ಅವರ ಅಭಿಮಾನಿ ವಲಯದಲ್ಲಿ ಇತ್ತು. ಆ ಹಿನ್ನೆಲೆಯಲ್ಲಿ ಬಹುತೇಕ ಅಭಿಮಾನಿಗಳು, ಬಿಗ್‌ ಬಾಸ್‌ ನಿಂದ ಹೊರಬರುವ ಅವರ ನಿರ್ಧಾರವನ್ನು ಸಂಭ್ರಮಿಸುತ್ತಿದ್ದಾರೆ.

Tags:    

Similar News