ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ: ಮುಗಿಬಿದ್ದ ಅಭಿಮಾನಿಗಳು
ದೇವಸ್ಥಾನದ ಹೊರಾಂಗಣದಲ್ಲಿ ಕಿಚ್ಚ ಸುದೀಪ್ ನೋಡಲು ಅಭಿಮಾನಿಗಳು ಸಾಗರವೇ ನೆರೆದಿತ್ತು. ಕಿಚ್ಚ ಸುದೀಪ್ ಕಂಡೊಡನೆ ಜೈಕಾರ ಹಾಕಿದ್ದಾರೆ.;
ಪತ್ನಿ ಪ್ರಿಯಾ ಅವರೊಂದಿಗೆ ಕಿಚ್ಚ ಸುದೀಪ್ ಅವರು ಇಂದು (ಮೇ 27) ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ನಾಡ ಅದಿದೇವತೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ದೇವಸ್ಥಾನದ ಹೊರಾಂಗಣದಲ್ಲಿ ಕಿಚ್ಚ ಸುದೀಪ್ ನೋಡಲು ಅಭಿಮಾನಿಗಳು ಸಾಗರವೇ ನೆರೆದಿತ್ತು. ಕಿಚ್ಚ ಸುದೀಪ್ ಕಂಡೊಡನೆ ಜೈಕಾರ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಸುದೀಪ್ 'ಮ್ಯಾಕ್ಸ್' ಸಿನಿಮಾ ಶೂಟಿಂಗ್ ಕಂಪ್ಲಿಟ್ ಆಗಿದೆ ಎಂದು ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು.
ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್. ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಶೀಘ್ರದಲ್ಲೇ ಈ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಅವರು ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಸಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ರೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ.
ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.