`ಕಾಂತಾರ ಅಧ್ಯಾಯ-1': ಸೆ.22ಕ್ಕೆ ಟ್ರೇಲರ್ ಬಿಡುಗಡೆ

ರಿಷಬ್‌ ಶೆಟ್ಟಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ʼಕಾಂತಾರ ಅಧ್ಯಯ-1ʼ ಚಿತ್ರವು ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ.

Update: 2025-09-20 07:31 GMT

ಕಾಂತಾರ ಸಿನಿಮಾದಲ್ಲಿ ರಿಶಬ್‌ ಶೆಟ್ಟಿ

Click the Play button to listen to article

ಬಹು ನಿರೀಕ್ಷಿತ 'ಕಾಂತಾರ ಅಧ್ಯಾಯ-1' ಸಿನಿಮಾದ ಟ್ರೇಲರ್ ಸೆ.22ರಂದು ಮಧ್ಯಾಹ್ನ 12.40ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಚಿತ್ರವು ಅ. 2ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ ಎಂದು ಹೊಂಬಾಳೆ ಫಿಲಂಸ್ ಘೋಷಿಸಿದೆ.

ರಿಷಬ್‌ ಶೆಟ್ಟಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ.

ಕರಾವಳಿ ಕರ್ನಾಟಕದ ಅತೀಂದ್ರಿಯ ಲೋಕವನ್ನು ಅನಾವರಣಗೊಳಿಸುವ ಈ ಚಿತ್ರವು, ಪುರಾಣ, ಭಕ್ತಿ ಮತ್ತು ಅದೃಷ್ಟದ ನಡುವಿನ ಪೌರಾಣಿಕ ಕಥೆ ಹೇಳುತ್ತದೆ.

 ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಅದ್ಭುತ ಸಂಗೀತ, ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರ ದೃಶ್ಯ ವೈಭವ ಮತ್ತು ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಅವರ ವಿಶಿಷ್ಟ ಕಲಾಕೃತಿಗಳು ಚಿತ್ರಕ್ಕೆ ಮೆರುಗು ನೀಡಲಿವೆ.

ರಿಷಬ್ ಶೆಟ್ಟಿ, ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕಾಂತಾರ ಅಧ್ಯಾಯ-1' ಚಿತ್ರವು ಕಲೆ, ಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿದ್ದು, ಮತ್ತೊಮ್ಮೆ ಸಿನಿಪ್ರಿಯರನ್ನು ಸೆಳೆಯಲು ಸಿದ್ಧವಾಗಿದೆ.

Tags:    

Similar News