ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕನ್ನಡತಿ…
ಈ ಬಾರಿಯ 71ನೇ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ನಡೆಯಲಿದ್ದು, 21 ವರ್ಷದ ಸುಂದರಿ ಸಿನಿ ಶೆಟ್ಟಿ ಭಾರತದಿಂದ ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರತಿನಿಧಿಸುತ್ತಿದ್ದಾರೆ.;
ಬೆಂಗಳೂರು: ಈ ಬಾರಿಯ 71ನೇ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ನಡೆಯಲಿದ್ದು, 21 ವರ್ಷದ ಸುಂದರಿ ಸಿನಿ ಶೆಟ್ಟಿ ಭಾರತದಿಂದ ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರತಿನಿಧಿಸುತ್ತಿದ್ದಾರೆ.
ಕರ್ನಾಟಕದ ಉಡುಪಿ ಮೂಲದ ಸಿನಿ ಶೆಟ್ಟಿ ಈ ಹಿಂದೆ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ – 2022 ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಇವರು ದೇಶವನ್ನು ಪ್ರತಿನಿಧಿಸಲಿದ್ದಾರೆ.
30 ದಶಕಗಳ ಹಿಂದೆ ಮಿಸ್ ವಲ್ದ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಿತ್ತು. ಇದಾದ ಬರೋಬ್ಬರಿ 30 ದಶಕಗಳ ಬಳಿಕ ಮತ್ತೆ ಭಾರತದಲ್ಲಿ ಸ್ಪರ್ಧ ನಡೆಯುತ್ತಿದ್ದು, ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ITDC) 71ನೇ ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಫೆಬ್ರವರಿ 20 ರಂದು ದೆಹಲಿಯ ಸ್ಟಾರ್ ಹೋಟೆಲ್ ದಿ ಅಶೋಕ್‌ನಲ್ಲಿ ನಡೆಸಿ ಕೊಡಲಿದೆ. ಮಾರ್ಚ್ 9ರಂದು ಮಿಸ್ ವಲ್ಡ್ ಗ್ರಾಂಡ್ ಫಿನಾಲೆ ಮುಂಬೈನ ಜಿಯೋ ವಲ್ಡ್ ಕನ್ವೆಕ್ಷನ್ ನಡೆಯಲಿದೆ.
ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಮತ್ತು ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸಿನಿ ಶೆಟ್ಟಿ ಮುಂಬೈನ ಕಾಲೇಜೊಂದರಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ.