'ಮಂಜುಮ್ಮೆಲ್ ಬಾಯ್ಸ್‌'ಗೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ

ಈ ವರ್ಷ ತೆರೆಕಂಡ ಸಿನಿಮಾಗಳಲ್ಲಿ 'ಮಂಜುಮ್ಮೆಲ್ ಬಾಯ್ಸ್' ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿದೆ. ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಬಾಕ್ಸ್‌ ಆಫೀಸ್‌ನಲ್ಲಿ ಲೂಟಿ ಹೊಡೆದಿತ್ತು.

Update: 2024-05-23 10:19 GMT
ಸಂಗೀತ ಮಾಂತ್ರಿಕ ಇಳೆಯರಾಜ
Click the Play button to listen to article

ಮಲಯಾಳಂ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್'  ಸಿನಿಮಾ ತಂಡಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

ಈ ವರ್ಷ ತೆರೆಕಂಡ 'ಮಂಜುಮ್ಮೆಲ್ ಬಾಯ್ಸ್' ಮಲಯಾಳಂನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿದೆ. ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಬಾಕ್ಸ್‌ ಆಫೀಸ್‌ನಲ್ಲಿ ಲೂಟಿ ಹೊಡೆದಿತ್ತು.

ಇದೀಗ ಈ ಸಿನಿಮಾಗೆ ಕಂಟಕ ಎದುರಾಗಿದ್ದು, ಮಲಯಾಳಂ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್'ನಲ್ಲಿ ಬಳಸಿದ "ಕಣ್ಮಣಿ.." ಹಾಡನ್ನು ಇಳಯರಾಜ ಕಂಪೋಸ್ ಮಾಡಿದ್ದರು. ಕಮಲ್ ಹಾಸನ್ ನಟಿಸಿದ 'ಗುಣ' ಸಿನಿಮಾಗಾಗಿ ಇಳಯರಾಜ ಆ ಟ್ಯೂನ್ ಹಾಕಿದ್ದರು. ಆ ಹಾಡನ್ನು 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ತಂಡ ಬಳಸಿಕೊಂಡಿತ್ತು. ಈ ಕಾರಣಕ್ಕೆ ಇಳಯರಾಜ ತಮ್ಮ ಅನುಮತಿ ಇಲ್ಲದೇ ಈ ಹಾಡನ್ನು ಬಳಸಿಕೊಂಡಿದ್ದಾರೆಂದು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

 'ಗುಣ' ಸಿನಿಮಾಗಾಗಿ ಕಂಪೋಸ್ ಮಾಡಿದ್ದ "ಕಣ್ಮಣಿ.." ಹಾಡನ್ನು 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ನಿರ್ಮಾಪಕರು ಅನುಮತಿ ಪಡೆಯದೆ ಬಳಸಿಕೊಂಡಿದ್ದಾರೆಂದು ಆರೋಪ ಮಾಡಲಾಗಿದೆ. ನಿರ್ಮಾಪಕರು ತನ್ನೊಂದಿಗೆ ಸರಿಯಾದ ರೀತಿಯಲ್ಲಿ ಅನುಮತಿಯನ್ನು ಪಡೆಯಬೇಕು. ಇಲ್ಲದೇ ಹೋದಲ್ಲಿ ಸಿನಿಮಾದಿಂದ ಆ ಹಾಡನ್ನು ತೆಗೆದು ಹಾಕಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇಳಯರಾಜ ಅವರ ಕಾನೂನು ಸಲಹೆಗಾರರು 'ಮಂಜುಮ್ಮೆಲ್ ಬಾಯ್ಸ್'ನಲ್ಲಿ ತಮ್ಮ ಹಾಡನ್ನು ತೆಗೆದು ಹಾಕಬೇಕು. ಇಲ್ಲವೇ ಸರಿಯಾದ ರೀತಿಯಲ್ಲಿ ಅನುಮತಿ ಪಡೆದು ಹಾಡನ್ನು ಬಳಸಿಕೊಳ್ಳಬೇಕು ಎಂದು ಚಿತ್ರದ ನಿರ್ಮಾಪಕರಿಗೆ ನೋಟಿಸ್ ಕಳುಹಿಸಿದೆ. 'ಮಂಜುಮ್ಮೆಲ್ ಬಾಯ್ಸ್' ಸಿನಿಮಾದ ನಿರ್ಮಾಪಕರಾದ ಸೌಬಿನ್ ಶಾಹಿರ್, ಬಾಬು ಶಾಹಿರ್ ಹಾಗೂ ಶಾನ್ ಆಂಟೋನಿಗೆ ನೋಟಿಸ್ ಕಳುಹಿಸಲಾಗಿದೆ.

ತಮಿಳುನಾಡಿನ ಕೊಡೈಕೆನಾಲ್ ನಲ್ಲಿರುವ ಗುಣ ಗುಹೆಗಳು ಪ್ರವಾಸಿಗರನ್ನು ಆಕರ್ಷಿಸುವ ಕಲ್ಲುಗಳ ರಾಶಿಯಲ್ಲಿರುವ ತಾಣ. ಈ ಗುಹೆಯ ಹೆಸರು ಡೆವಿಲ್ಸ್ ಕಿಚನ್‌ ಎಂದಾಗಿತ್ತು. ಆದರೆ ಕಮಲ್ ಹಾಸನ್ ಅಭಿನಯದ ಗುಣ ಸಿನಿಮಾ ಶೂಟಿಂಗ್ ಈ ಗುಹೆಯಲ್ಲಿ ನಡೆದ ಮೇಲೆ ಡೆವಿಲ್ಸ್ ಕಿಚನ್ ಎನ್ನುವ ಬದಲು ಗುಣ ಗುಹೆ ಎಂದು ಕರೆಯುತ್ತಾ ಬಂದರು. ಗುಣ ಗುಹೆಯು 1991ರಲ್ಲಿ ಸಂತಾನಂ ಭಾರತಿ ನಿರ್ದೇಶಿಸಿದ ಕಮಲ್ ಹಾಸನ್ ನಟಿಸಿರುವ ಗುಣ ತಮಿಳು ಸಿನಿಮಾ ಬಂದ ಮೇಲೆ ಪ್ರಖ್ಯಾತಿ ಪಡೆಯಿತು. ಈ ಸಿನಿಮಾದಲ್ಲಿ ಕಣ್ಮಣಿ ಅನ್ಬೋಡು ಹಾಡು ಬಹಳಷ್ಟು ಪ್ರಸಿದ್ದಿಯನ್ನು ಪಡೆದಿತ್ತು. ಈ ಹಾಡನ್ನು ಇಳೆಯರಾಜ ಅವರು ಕಂಪೋಸ್‌ ಮಾಡಿದ್ದರು. ಈ ಹಾಡನ್ನು ಜನರು ಬಹಳ ಇಷ್ಟಪಟ್ಟಿದ್ದರು. ಈ ಹಾಡು ‘ಮಂಜುಮ್ಮೆಲ್ ಬಾಯ್ಸ್’ನಲ್ಲಿ ಬಳಕೆ ಆಗಿದ್ದು, ಈ ಸಿನಿಮಾ ತೆರೆಕಂಡ ಮೇಲೆ ಈ ಹಾಡು ಮತ್ತೆ ಮುನ್ನಲೆಗೆ ಬಂದು ಸಾಕಷ್ಟು ವೈರಲ್‌ ಆಗತೊಡಗಿತು. ಸೋಶಿಯಲ್ ಮೀಡಿಯಾಗಳಲ್ಲಿ ಜನರು ರೀಲ್ಸ್ ಮಾಡಿ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಕ್ಕೆ ಶುರು ಮಾಡಿದ್ದರು.

ಮಲಯಾಳಂ ಸೂಪರ್ ಹಿಟ್ ಸಿನಿಮಾ ಮಂಜುಮ್ಮೆಲ್ ಬಾಯ್ಸ್ 2006 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಮಾಡಿದ್ದು, ಕೇರಳದ ಗೆಳೆಯರ ಗುಂಪು ಕೊಡೈಕೆನಾಲ್‌ಗೆ ಪ್ರವಾಸಕ್ಕೆ ಹೊರಡುತ್ತದೆ. ಅದರಲ್ಲೊಬ್ಬಾತ ಪ್ರವಾತದೊಳಗೆ ಬೀಳುತ್ತಾನೆ. ಆತನನ್ನು ಹೇಗೆ ಮೇಲೆಕ್ಕೆ ಎತ್ತುತ್ತಾರೆ ಎನ್ನುವುದೇ ಕಥಾವಸ್ತು.

ಕೇರಳ ಮತ್ತು ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಮಂಜುಮ್ಮೆಲ್ ಬಾಯ್ಸ್, ಬಿಡುಗಡೆಯಾದ ಕೇವಲ 26 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಕಲೆಕ್ಷನ್ ಮಾಡಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Tags:    

Similar News