ಹೊಂಬಾಳೆ ಫಿಲಂಸ್‌ನಿಂದ ಬಾಲಿವುಡ್‌ಗೆ ಎಂಟ್ರಿ: ಹೃತಿಕ್ ರೋಶನ್ ಜೊತೆ ಮೊದಲ ಹಿಂದಿ ಚಿತ್ರ ಘೋಷಣೆ
ಬಾಲಿವುಡ್‍ನ ಜನಪ್ರಿಯ ನಟ ಹೃತಿಕ್ ರೋಶನ್ ಅಭಿನಯದಲ್ಲಿ ಹೊಸ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುವುದಕ್ಕೆ ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಮುಂದಾಗಿದ್ದು, ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಅಧಿಕೃತ ಘೋಷಣೆ ಮಾಡಲಾಗಿದೆ.;
ನಟ ಹೃತಿಕ್ ರೋಶನ್
ಹೊಂಬಾಳೆ ಫಿಲಂಸ್ ಸಂಸ್ಥೆಯು ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ, ತೆಲುಗಿನಲ್ಲಿ ‘ಸಲಾರ್’, ತಮಿಳಿನಲ್ಲಿ ‘ರಘು ತಥಾ’ ಮತ್ತು ಮಲಯಾಳಂ ಭಾಷೆಗಳಲ್ಲಿ ‘ಧೂಮಂ’ ಚಿತ್ರಗಳನ್ನು ನಿರ್ಮಿಸಿತ್ತು. ನಾಲ್ಕು ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ ಈ ಸಂಸ್ಥೆಯು ಹಿಂದಿಯಲ್ಲೂ ಚಿತ್ರ ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಇದ್ದೇ ಇತ್ತು. ಆದರೆ, ಹೊಂಬಾಳೆ ಫಿಲಂಸ್ ಸಂಸ್ಥೆಯು ಹಿಂದಿಯಲ್ಲಿ ಅಧಿಕೃತವಾಗಿ ಯಾವುದೇ ಚಿತ್ರವನ್ನು ಘೋಷಿಸಿರಲಿಲ್ಲ. ಇದೀಗ ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಿಸುವುದಕ್ಕೆ ಸಂಸ್ಥೆ ಸಜ್ಜಾಗಿದೆ.
ಬಾಲಿವುಡ್‍ನ ಜನಪ್ರಿಯ ನಟ ಹೃತಿಕ್ ರೋಶನ್ ಅಭಿನಯದಲ್ಲಿ ಹೊಸ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುವುದಕ್ಕೆ ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಮುಂದಾಗಿದ್ದು, ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಅಧಿಕೃತ ಘೋಷಣೆ ಮಾಡಲಾಗಿದೆ.
ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ? ಯಾರು ನಿರ್ದೇಶನ ಮಾಡುತ್ತಾರೆ? ಯಾರೆಲ್ಲಾ ಈ ಚಿತ್ರದ ಭಾಗವಾಗಲಿದ್ದಾರೆ? ಎಂಬ ವಿಷಯಗಳ ಬಗ್ಗೆ ಹೊಂಬಾಳೆ ಫಿಲಂಸ್ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಚಿತ್ರದ ಘೋಷಣೆಯಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
ಹೃತಿಕ್ ರೋಶನ್ ಅಭಿನಯದ ‘ವಾರ್ 2’ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ ವ್ಯಕ್ತವಾಗಿದೆ. ಇದಲ್ಲದೆ, ‘ಕ್ರಿಶ್ 4’ ಚಿತ್ರದಲ್ಲಿ ಹೃತಿಕ್ ರೋಶನ್ ನಟಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದದೆ. ಆ ಚಿತ್ರದ ಚಿತ್ರೀಕರಣ ಇದೇ ವರ್ಷ ಪ್ರಾರಂಭವಾಗಲಿದ್ದು, ಅದು ಮುಗಿದ ನಂತರ ಹೊಂಬಾಳೆ ಫಿಲಂಸ್ ಜೊತೆಗಿನ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.
ಸದ್ಯ, ಹೊಂಬಾಳೆ ಫಿಲಂಸ್ ಸಂಸ್ಥೆಯು ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ರ ಚಿತ್ರವನ್ನು ನಿರ್ಮಿಸುತ್ತಿದ್ದು, ಅಕ್ಟೋಬರ್ 02ರಂದು ಈ ಚಿತ್ರ ಬಿಡುಡೆಯಾಗುತ್ತಿದೆ. ಮೊದಲು ಈ ಚಿತ್ರ ಅಂದುಕೊಂಡ ಸಮಯದಲ್ಲಿ ಬಿಡುಗಡೆಯಾಗುತ್ತದೋ, ಇಲ್ಲವೋ ಎಂಬ ಅನುಮಾನವಿತ್ತು. ಕಳೆದ ವಾರವಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ, ಚಿತ್ರವು ಅಂದುಕೊಂಡಂತೆ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಇದರ ಜೊತೆಗೆ ಪ್ರಭಾಸ್ ಅಭಿನಯದಲ್ಲಿ ‘ಸಲಾರ್ 2’ ಸೇರಿದಂತೆ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಹೊಂಬಾಳೆ ಫಿಲಂಸ್ ಕೆಲವು ತಿಂಗಳ ಹಿಂದೆ ಘೋಷಿಸಿದ್ದು, ಆ ಚಿತ್ರಗಳು ಸಹ ಇನ್ನಷ್ಟೇ ಶುರುವಾಗಬೇಕಿದೆ.