ಅರಸು ಅಂತಾರೆ ನಿರ್ದೇಶನದ ನೂತನ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ

ಅರಸು ಅಂತಾರೆ ಅವರ ಚಿತ್ರಕಥೆಗೆ ಮಹೇಶ್ ದೇವ್ ಡಿ ಎನ್ ಪುರ ಹಾಗೂ ಸಂಭಾಷಣೆಗೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಾಥ್ ನೀಡಿದ್ದಾರೆ.;

Update: 2025-03-13 07:36 GMT

ತಮ್ಮ ಹಾಡುಗಳ ಮೂಲಕ ಜನಪ್ರಿಯರಾಗಿರುವ ಗೀತರಚನೆಕಾರ ಹಾಗೂ ʻಲವ್ ಇನ್ ಮಂಡ್ಯʼ ಚಿತ್ರದ ನಿರ್ದೇಶಕ ಅರಸು ಅಂತಾರೆ ಅವರ ಮುಂದಿನ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿದ್ದಾರೆ. ತೆಲುಗಿನ ʻಹನುಮಾನ್ʼ ಸಿನಿಮಾ ಖ್ಯಾತಿಯ ಅಮೃತಾ ಅಯ್ಯರ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಈ ಮೂಲಕ ಅಮೃತಾ ಅಯ್ಯರ್ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ.

ಎಸ್‌ಎನ್‌ಟಿ ಎಂಟರ್ಪ್ರೈಸಸ್ ಲಾಂಛನದಲ್ಲಿ ರವಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಕೌಟುಂಬಿಕ ಕಥಾಹಂದರ ಹೊಂದಿದೆ. ಅರಸು ಅಂತಾರೆ ಯವರ ಚಿತ್ರಕಥೆಗೆ ಮಹೇಶ್ ದೇವ್ ಡಿ ಎನ್ ಪುರ ಹಾಗೂ ಸಂಭಾಷಣೆಗೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಾಥ್ ನೀಡಿದ್ದಾರೆ.

ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ, ವಿಜಯ್ ರಾಕೇಶ್ ಕಶ್ಯಪ್ ಮತ್ತು ಕೀರ್ತಿ ಕೃಷ್ಣಪ್ಪ ಅವರ ಸಹ ನಿರ್ದೇಶನವಿರುವ ಈ ನೂತನ ಚಿತ್ರಕ್ಕೆ ರಮೇಶ್ ಅವರ ನಿರ್ಮಾಣ ನಿರ್ವಹಣೆ ಇದೆ. 

ಏಪ್ರಿಲ್ 6 ರಂದು ನಮ್ಮ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ‌. ಏಪ್ರಿಲ್ 7 ರಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿರುವ ನಿರ್ದೇಶಕ ಅರಸು ಅಂತಾರೆ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

Tags:    

Similar News