ನಟಿ ರುಕ್ಮಿಣಿ ವಸಂತ್ ಹೆಸರಲ್ಲಿ ವಂಚನೆ: ಖಡಕ್ ಎಚ್ಚರಿಕೆ ನೀಡಿದ 'ಕಾಂತಾರ'ದ ಕನಕವತಿ

ಒಬ್ಬ ವ್ಯಕ್ತಿಯು, 9445893273 ಸಂಖ್ಯೆಯ ಮೊಬೈಲ್‌ನಿಂದ ತಾನೇ ರುಕ್ಮಿಣಿ ವಸಂತ್ ಎಂದು ಹೇಳಿಕೊಂಡು ಹಲವರಿಗೆ ಸಂದೇಶಗಳನ್ನು ಕಳುಹಿಸಿದ್ದಾನೆ. ಸುಳ್ಳು ನೆಪಗಳನ್ನು ಹೇಳಿ ಸಂಭಾಷಣೆ ಬೆಳೆಸಲು ಯತ್ನಿಸಿದ್ದಾನೆ.

Update: 2025-11-08 07:05 GMT

ರುಕ್ಮಿಣಿ ವಸಂತ್

Click the Play button to listen to article

'ಕಾಂತಾರ ಅಧ್ಯಾಯ 1' ಚಿತ್ರದ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಗೆ ವಂಚನೆ ಮಾಡಲು ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ವಂಚಕನ ವಿರುದ್ಧ ಕಿಡಿಕಾರಿದ್ದು, ಅಭಿಮಾನಿಗಳಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ.

ಒಬ್ಬ ವ್ಯಕ್ತಿಯು, 9445893273 ಸಂಖ್ಯೆಯ ಮೊಬೈಲ್‌ನಿಂದ ತಾನೇ ರುಕ್ಮಿಣಿ ವಸಂತ್ ಎಂದು ಹೇಳಿಕೊಂಡು ಹಲವರಿಗೆ ಸಂದೇಶಗಳನ್ನು ಕಳುಹಿಸಿದ್ದಾನೆ. ಸುಳ್ಳು ನೆಪಗಳನ್ನು ಹೇಳಿ ಸಂಭಾಷಣೆ ಬೆಳೆಸಲು ಯತ್ನಿಸಿದ್ದಾನೆ. ಈ ವಿಷಯವು ರುಕ್ಮಿಣಿ ಅವರ ಗಮನಕ್ಕೆ ಬರುತ್ತಿದ್ದಂತೆ, ಅವರು ತಕ್ಷಣವೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆ ಸಂಖ್ಯೆ ತನಗೆ ಸೇರಿದ್ದಲ್ಲ, ಅದರಿಂದ ಬರುವ ಯಾವುದೇ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಅವರು ಮನವಿ ಮಾಡಿದ್ದಾರೆ.

 ನಟಿಯ ಎಚ್ಚರಿಕೆಯ ಸಂದೇಶ

"ಪ್ರಮುಖ ಎಚ್ಚರಿಕೆ ಮತ್ತು ಜಾಗೃತಿ ಸಂದೇಶ," ಎಂದು ತಮ್ಮ ಪೋಸ್ಟ್ ಆರಂಭಿಸಿರುವ ರುಕ್ಮಿಣಿ, "ಒಬ್ಬ ವ್ಯಕ್ತಿಯು ನನ್ನಂತೆ ನಟಿಸಿ ಅನೇಕರಿಗೆ ಕರೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ (9445893273) ನನಗೆ ಸೇರಿದ್ದಲ್ಲ, ಹಾಗಾಗಿ ಅದರಿಂದ ಬರುವ ಯಾವುದೇ ಕರೆಗಳು ಸಂಪೂರ್ಣ ನಕಲಿಯಾಗಿದೆ. ದಯವಿಟ್ಟು ಯಾರೂ ಇದಕ್ಕೆ ಪ್ರತಿಕ್ರಿಯಿಸಬೇಡಿ," ಎಂದು ಬರೆದುಕೊಂಡಿದ್ದಾರೆ.

"ಈ ರೀತಿಯ ಕೃತ್ಯವು ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ. ಇಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸ್ಪಷ್ಟೀಕರಣ ಬೇಕಿದ್ದರೆ, ನನ್ನನ್ನು ಅಥವಾ ನನ್ನ ತಂಡವನ್ನು ನೇರವಾಗಿ ಸಂಪರ್ಕಿಸಬಹುದು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ" ಎಂದು ಅವರು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

Tags:    

Similar News