‘ಎಕ್ಕ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ; 4 ದಿನಗಳಲ್ಲಿ 6.12 ಕೋಟಿ ರೂ. ಗಳಿಕೆ

ಪಿಆರ್‌ಕೆ ಪ್ರೊಡಕ್ಷನ್ಸ್​​ನ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಫಿಲ್ಮ್ಸ್​​​ನ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್‌ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಅವರು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.;

Update: 2025-07-22 06:48 GMT

ಯುವ ರಾಜ್‌ಕುಮಾರ್ ಅಭಿನಯದ ‘ಎಕ್ಕ’ ಸಿನಿಮಾ 4 ದಿನಕ್ಕೆ 6.12 ಕೋಟಿ ರೂ ಕಲೆಕ್ಷನ್‌ ಮಾಡಿದೆ. 

ಯುವ ರಾಜ್‌ಕುಮಾರ್‌ ನಟನೆಯ 'ಎಕ್ಕ' ಸಿನಿಮಾ 4 ದಿನಗಳಲ್ಲಿ ವಿಶ್ವಾದ್ಯಂತ 6.12 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ.

ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ನಟಿಸಿರುವ ಎಕ್ಕ' ಚಿತ್ರ ಕಳೆದ ಶುಕ್ರವಾರ ಬಿಡುಗಡೆಗೊಂಡಿತ್ತು.ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದ್ದ'ಎಕ್ಕ'ದ ಬಾಕ್ಸ್​​ ಆಫೀಸ್​​​ ಪ್ರಯಾಣ ಉತ್ತಮವಾಗಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್​​ನ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಫಿಲ್ಮ್ಸ್​​​ನ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್‌ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 

ರೋಹಿತ್​​ ಪದಕಿ ನಿರ್ದೇಶನ ಮಾಡಿರುವ​​​ ಈ ಚಿತ್ರ ಜುಲೈ 18, ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. 1.45 ಕೋಟಿ ರೂಪಾಯಿಯೊಂದಿಗೆ ಬಾಕ್ಸ್​ ಆಫೀಸ್​ ಕಲೆಕ್ಷನ್​​ ಆರಂಭಿಸಿದ ಸಿನಿಮಾ ಶನಿವಾರ 1.35 ಕೋಟಿ ರೂ., ಮೂರನೇ ದಿನ 1.65 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು. ನಾಲ್ಕನೇ ದಿನ ತನ್ನ ಮೊದಲ ಸೋಮವಾರ 0.78 ಕಲೆಕ್ಷನ್​​ ಮಾಡೋ ಮೂಲಕ ಈವರೆಗೆ 5.23 ರೂ.ನ ವ್ಯವಹಾರ (ಇಂಡಿಯಾ ನೆಟ್​​ ಕಲೆಕ್ಷನ್​​ನಡೆಸಿದೆ.

'ಎಕ್ಕ' ಸಿನಿಮಾ ಚಿತ್ರವು ತಾಯಿ-ಮಗನ ಬಾಂಧವ್ಯ ಮತ್ತು ಭೂಗತ ಲೋಕದ ಸುತ್ತ ಸುತ್ತುವ ಕಥೆಯಾಗಿದೆ. ಹಳ್ಳಿಯಿಂದ ನಗರಕ್ಕೆ ಬರುವ 'ಮುತ್ತು' (ಯುವ ರಾಜ್‌ಕುಮಾರ್) ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ. ಒಂದು ಘಟನೆ ಅವನನ್ನು ಭೂಗತ ಜಗತ್ತಿಗೆ ಹೇಗೆ ಕರೆದೊಯ್ಯತ್ತದೆ ಎಂಬುವುದು ಈ ಸಿನಿಮಾದ ಕಥಾಹಂದರವಾಗಿದೆ. ಯುವ ರಾಜ್‌ಕುಮಾರ್ ತಾಯಿಯಾಗಿ ಹಿರಿಯ ನಟಿ ಶೃತಿ ಕಾಣಿಸಿಕೊಂಡರೆ, ನಾಯಕಿಯಾಗಿ ನಂದಿನಿ ಪಾತ್ರದಲ್ಲಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. 

ಇನ್ನುಳಿದಂತೆ, ಅತುಲ್ ಕುಲಕರ್ಣಿ, ಆದಿತ್ಯ, ಸಂಪದಾ ಮುಂತಾದವರು ತಾರಾಂಗಣದಲ್ಲಿದ್ದಾರೆ.  ಚರಣ್ ರಾಜ್ ಅವರ ಸಂಗೀತ ಮತ್ತು 'ಬ್ಯಾಂಗಲ್ ಬಂಗಾರಿ', 'ಎಕ್ಕ ಮಾರ್..' ಹಾಡುಗಳು ಬಹಳಷ್ಟು ವೈರಲ್‌ ಆಗಿತ್ತು. 

Tags:    

Similar News