Valentine's Day | ಪ್ರೇಮಿಗಳ ದಿನ ದರ್ಶನ್ ಅಭಿನಯದ 'ನಮ್ಮ ಪ್ರೀತಿ ರಾಮು' ಮರು ಬಿಡುಗಡೆ
ಪ್ರೇಮಿಗಳ ದಿನದಂದು ನಟ ದರ್ಶನ್ ಅಭಿನಯದ ʼನಮ್ಮ ಪ್ರೀತಿಯ ರಾಮುʼ ಚಿತ್ರ ಮರುಬಿಡುಡೆಯಾಗಲಿದೆ. ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ ಎಂದು ದರ್ಶನ್ ಅವರೇ ಬಹಿರಂಗವಾಗಿ ಹೇಳಿರುವುದರಿಂದ ಈ ಚಿತ್ರವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.;
ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಪ್ರಯುಕ್ತ ನಟ ದರ್ಶನ್ ಅಭಿನಯದ 'ನಮ್ಮ ಪ್ರೀತಿಯ ರಾಮು' ಸಿನಿಮಾ ಮರು ಬಿಡುಗಡೆಯಾಗಲಿದೆ.
ಸಂಜಯ್-ವಿಜಯ್ ನಿರ್ದೇಶನದ "ನಮ್ಮ ಪ್ರೀತಿಯ ರಾಮು" ಚಿತ್ರವು ದರ್ಶನ್ ವೃತ್ತಿಜೀವನದ ಅದ್ವಿತೀಯ ಚಿತ್ರಗಳಲ್ಲಿ ಒಂದು. ಚಿತ್ರದಲ್ಲಿ ದೃಷ್ಟಿಹೀನ ಗಾಯಕನಾಗಿ ದರ್ಶನ್ ಕಾಣಿಸಿಕೊಂಡಿದ್ದು, ಅಮೋಘ ಅಭಿನಯದಿಂದ ಮೆಚ್ಚುಗೆ ಪಡೆದಿದ್ದರು.
ಪಾತ್ರದ ಬಗ್ಗೆ ದರ್ಶನ್ ಅವರೇ ಹೇಳುವಂತೆ "ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ. ಜೊತೆಗೆ ಅತ್ಯಂತ ಸವಾಲಿನ ಪಾತ್ರವೂ ಆಗಿತ್ತು. ಚಿತ್ರೀಕರಣದ ವೇಳೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಲು ನಿರಾಕರಿಸಿ, ನೈಜವಾಗಿ ಅಭಿನಯ ಮಾಡಿದ್ದೆ. ಇಳಯರಾಜ ಅವರಿಂದ ಸಂಯೋಜಿಸಲ್ಪಟ್ಟ ಚಿತ್ರದ ಸಂಗೀತವು ಕೂಡ ಮೆಚ್ಚುಗೆ ಪಡೆದಿತ್ತು ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ದರ್ಶನ್ ಅವರ ಕಾಟೇರ, ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. 2024ರಲ್ಲಿ ಕರಿಯ, ಶಾಸ್ತ್ರಿ ಮತ್ತು ನವಗ್ರಹದಂತಹ ಕ್ಲಾಸಿಕ್ ಚಿತ್ರಗಳು ರೀರಿಲೀಸ್ ಆಗಿದ್ದವು.
ನಟ ದರ್ಶನ್ ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿ ಬಳಿಕ ಜಾಮೀನಿನ ಮೂಲಕ ಹೊರಬಂದಿದ್ದರು. ಸದ್ಯ ಅವರು ಪ್ರಕಾಶ್ ವೀರ್ ನಿರ್ದೇಶನದ 'ಡೆವಿಲ್: ದಿ ಹೀರೋ' ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ.