ಅಂಬಾರಿ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಕಲ್ಲು ಚಪ್ಪಡಿ ರವಾನಿಸಿದ ದರ್ಶನ್: ವಿಡಿಯೋ ವೈರಲ್
ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ನಟ ದರ್ಶನ್ ನೆರವು ನೀಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.;
ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ನಟ ದರ್ಶನ್ ನೆರವು ನೀಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ದರ್ಶನ್ ನೆರವು ನೀಡಿದ್ದು, ಸ್ಮಾರಕ ನಿರ್ಮಾಣಕ್ಕೆ ಬೇಕಾದಷ್ಟು ಕಲ್ಲು ಚಪ್ಪಡಿಗಳನ್ನು ಅವರು ಕಳುಹಿಸಿದ್ದಾರೆ. ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿದ್ದು, ಈಗಾಗಲೇ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿದೆ.
ಈ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅರ್ಜುನ ಆನೆ ಸಮಾಧಿ ಕುರಿತು ಪೋಸ್ಟ್ ಮಾಡಿ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡುವುದಾಗಿ ದರ್ಶನ್ ಮಾತು ಕೊಟ್ಟಿದ್ದರು. ಈ ಮಾತನ್ನು ಅವರು ಉಳಿಸಿಕೊಂಡಿದ್ದು, ಕಲ್ಲನ್ನು ಸಮಾಧಿ ಸ್ಥಳಕ್ಕೆ ಪ್ರಯಾಸದಿಂದ ಸಾಗಿಸಿರೋ ಬಗ್ಗೆ ವೀಡಿಯೋ ಮಾಡಿ ದರ್ಶನ್ ಆಪ್ತರು ಶೇರ್ ಮಾಡಿದ್ದಾರೆ.
ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ದರ್ಶನ್ ಪ್ರಾಣಿಪ್ರಿಯರಾಗಿದ್ದು, ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಬಗೆಯ ಪ್ರಾಣಿ-ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದಾರೆ. ಮಾತ್ರವಲ್ಲದೇ ಅವರು ಈಗಾಗಲೇ ಮೈಸೂರಿನ ಮೃಗಾಲಯದ ಸಾಕಷ್ಟು ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.