ಹಾಸ್ಯ ನಟ ಚಿಕ್ಕಣ್ಣ ವೈವಾಹಿಕ ಜೀವನಕ್ಕೆ: ಉದ್ಯಮಿ ಪಾವನಾ ಜೊತೆ ನಿಶ್ಚಿತಾರ್ಥ

ಮಹದೇವಪುರ ಗ್ರಾಮದ ಪಾವನಾ ಎಂಬ ಹುಡುಗಿ ಜೊತೆ ನಟ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದೆ ಎನ್ನಲಾಗಿದೆ.

Update: 2025-09-01 05:40 GMT

ನಟ ಚಿಕ್ಕಣ್ಣ ಮದುವೆ ಫಿಕ್ಸ್ 

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ, ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ಸರಳವಾಗಿ ನೆರವೇರಿದೆ.

ಮೂಲತಃ ಮಹದೇವಪುರ ಗ್ರಾಮದವರಾದ ಪಾವನಾ ಎಂಬುವವರನ್ನು ಚಿಕ್ಕಣ್ಣ ವರಿಸಲಿದ್ದಾರೆ. ಚಿಕ್ಕಣ್ಣ ಮತ್ತು ಪಾವನಾ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಪಾವನಾ, 'Greenaura Techno Ventures' ಎಂಬ ಸಂಸ್ಥೆ ಸ್ಥಾಪಿಸಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಟಿವಿ ಕಾರ್ಯಕ್ರಮಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚಿಕ್ಕಣ್ಣ, 'ರಾಜಹುಲಿ' (2013) ಮತ್ತು 'ಅಧ್ಯಕ್ಷ' (2014) ಚಿತ್ರಗಳಲ್ಲಿ ಕ್ರಮವಾಗಿ ಯಶ್ ಮತ್ತು ಶರಣ್ ಅವರೊಂದಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದರು. 2024ರಲ್ಲಿ ತೆರೆಕಂಡ 'ಉಪಾಧ್ಯಕ್ಷ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಯಶಸ್ಸು ಕಂಡಿದ್ದಾರೆ.

ಎರಡೂ ಕುಟುಂಬಗಳ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರ ನೆರವೇರಿದ್ದು, ಮದುವೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದಾಗ್ಯೂ, ಈ ಜೋಡಿ ಶೀಘ್ರದಲ್ಲೇ ವಿವಾಹವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Tags:    

Similar News