ಸದ್ದಿಲ್ಲದೆ ಹಸೆಮಣೆ ಏರಿದ ಬಿಗ್‌ಬಾಸ್‌ ಸ್ಪರ್ಧಿ ಸಿರಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ಹಾಗೂ ರಂಗೋಲಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರೋ ನಟಿ ಸಿರಿ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Update: 2024-06-14 11:10 GMT
ಕಿರುತೆರೆ ನಟಿ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ಹಾಗೂ ರಂಗೋಲಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನಟಿ ಸಿರಿ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಸಿರಿಯವರು ಪ್ರಭಾಕರ್ ಬೋರೇಗೌಡ ಎಂಬುವರನ್ನು ವಿವಾಹವಾಗಿದ್ದಾರೆ. ಗುರುವಾರ (ಜೂ.13) ಬೆಳಿಗ್ಗೆ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ದೇವಸ್ಥಾನವೊಂದರಲ್ಲಿ ಸರಳವಾಗಿ ಕುಟುಂಬ ಸಮ್ಮುಖದೊಂದಿಗೆ ಹಸೆಮಣೆ ಏರಿದ್ದಾರೆ. ವರ ಮಂಡ್ಯ ಮೂಲದವರಾಗಿದ್ದು, ಎಂಜಿನಿಯರ್ ಕಮ್ ಬ್ಯುಸಿನೆಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ.

Full View

ಎರಡು ದಿನಗಳ ಹಿಂದೆ ಸಿರಿ ಅವರ ಅರಿಶಿಣ ಶಾಸ್ತ್ರದ ವಿಡಿಯೋಗಳು ವೈರಲ್ ಆಗಿದ್ದವು. ಅದು ಸೀರಿಯಲ್ ಅಥವಾ ಸಿನಿಮಾಗಾಗಿ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಇದು ನಿಜವಾದ ಮದುವೆಯಾಗಿದ್ದು, ಸದ್ಯ ಈ ಜೋಡಿಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಸಿರಿ ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲೂ ಸಿರಿ ನಟಿಸಿದ್ದಾರೆ.

Tags:    

Similar News