"BAD" ಚಿತ್ರದಲ್ಲಿ ಇಂಗ್ಲಿಷ್ ಹಾಡು

ನಿಶಾನ್ ರೈ ಬರೆದಿರುವ ʻರೈಸ್ ಫ್ರಮ್ ದ ಮೂನ್ʼ ಹಾಡಿಗೆ ಅರ್ಜುನ್ ಜನ್ಯ ವಿಭಿನ್ನ ಸಂಗೀತ ಸಂಯೋಜಿಸಿದ್ದಾರೆ.;

Update: 2024-02-05 06:30 GMT
"BAD" ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಭಿನ್ನವಾಗಿ ಇಂಗ್ಲೀಷ್‌ ಹಾಡೊಂದನ್ನು ಸಂಯೋಜಿಸಿದ್ದಾರೆ.
Click the Play button to listen to article

ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ʻಬ್ಯಾಡʼ  ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂಗ್ಲೀಷ್‌ ಹಾಡೊಂದನ್ನು ಸಂಯೋಜಿಸಿದ್ದಾರೆ. ನಿಶಾನ್ ರೈ ಬರೆದು ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಹಾಡಿನ ಲಿರಿಕಲ್ ವಿಡಿಯೋ ಫೆಬ್ರವರಿ 5 ರಂದು ಬಿಡುಗಡೆಯಾಗಲಿದೆ.

ಚಿತ್ರದ ಟೀಸರ್ ಹಾಗೂ ಟ್ರೇಲರ್  ಈಗಾಗಲೇ ಜನರ ಮನ ಗೆದ್ದಿದೆ. ನಿಶಾನ್ ರೈ ಬರೆದಿರುವ ʻರೈಸ್ ಫ್ರಮ್ ದ ಮೂನ್ʼ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಹಾಡು ಕಪ್ಪು-ಬಿಳುಪಿನಲ್ಲಿ ಮೂಡಿಬಂದಿದೆ. ʻಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ  ಅಭಿನಯಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಈ ಹಾಡು ಬಳಸಿಕೊಳ್ಳಲಾಗುವುದುʼ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹೇಳಿದ್ದಾರೆ.

ನಕುಲ್ ಗೌಡ, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪಿ.ಸಿ.ಶೇಖರ್ ಸಂಕಲನ, ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣ,  ಸಚಿನ್ ಜಡೇಶ್ವರ ಎಸ್.ಬಿ.  ಸಂಭಾಷಣೆ ಬರೆದಿದ್ದು, ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿದ್ದಾರೆ.

Tags:    

Similar News