ಮಾ.17ಕ್ಕೆ ಪುನೀತ್ ಜನುಮದಿನ; ಅಭಿಮಾನಿಗಳಿಗೆ ಸಂಭ್ರಮ! `ಅಪ್ಪು' ಸಿನಿಮಾ ಮತ್ತೆ ತೆರೆಗೆ
23 ವರ್ಷದ ಬಳಿಕ ಮರು ಬಿಡುಗಡೆ ಆಗಿರುವ `ಅಪ್ಪು’ ಸಿನಿಮಾ ಬೆಂಗಳೂರಿನ ಹಲವೆಡೆ ಭರ್ಜರಿಯಾಗಿ ಓಡುತ್ತಿದ್ದು, ಬೆಂಗಳೂರಿನ ನರ್ತಕಿ, ವಿರೇಶ್ ಹಾಗೂ ಶ್ರೀನಿವಾಸ, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ ನಡೆಯುತ್ತಿದೆ.;
ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾ ಮರು ಬಿಡುಗಡೆಯಾಗಿದೆ.
ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ `ಅಪ್ಪು’ ಸಿನಿಮಾ ರಿ-ರಿಲೀಸ್ ಆಗಿದೆ. ಇದು ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಿರುವ 'ಫ್ಯಾನ್ಸ್ ಶೋ'
23 ವರ್ಷದ ಬಳಿಕ ಮರು ಬಿಡುಗಡೆ ಆಗಿರುವ `ಅಪ್ಪು’ ಸಿನಿಮಾ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿವೆ. ನರ್ತಕಿ, ವಿರೇಶ್ ಹಾಗೂ ಶ್ರೀನಿವಾಸ, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಚಿತ್ರ ನೋಡಿ ಸಂಭ್ರಮಿಸುತ್ತಿದ್ದಾರೆ. ಅಪ್ಪು ಕುಟುಂಬಸ್ಥರೂ ಹಾಗೂ ಸಿನಿಮಾ ತಂಡದವರು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
‘ಅಪ್ಪು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ನಟಿ ರಕ್ಷಿತಾ, ‘ಸಿನಿಮಾ ನೋಡಿ ಭಾವುಕರಾಗಿ ಮಾತನಾಡಿದ್ದಾರೆ. ‘ನಾನು ಇದೇ ಮೊದಲ ಬಾರಿಗೆ ‘ಅಪ್ಪು’ ಸಿನಿಮಾ ಪೂರ್ತಿ ನೋಡಿದೆ. ಸಿನಿಮಾ ಈಗಲೂ ಫ್ರೆಶ್ ಎನಿಸುತ್ತದೆ. ‘ಆಶಿಖಿ’ ಯಂತೆ ಕೆಲವು ಎವರ್ ಗ್ರೀನ್ ಲವ್ ಸ್ಟೋರಿ ಸಿನಿಮಾಗಳ ರೀತಿಯೇ ‘ಅಪ್ಪು’ ಸಿನಿಮಾದ ಲವ್ ಸ್ಟೋರಿ ಬಹಳ ಎವರ್ ಗ್ರೀನ್. ಅಪ್ಪು ಮತ್ತು ಸುಚಿ ಅವರ ಲವ್ ಸ್ಟೋರಿ ಅದ್ಭುತವಾದುದು. ಈಗಲೂ ಸಿನಿಮಾ ನೋಡುತ್ತಿದ್ದಾಗ ಆ ಎರಡು ಪಾತ್ರಗಳ ಲವ್ ಸ್ಟೋರಿ 'ಹೃದಯ ಸ್ಪರ್ಶಿ' ಅನಿಸುತ್ತದೆ’ ಎಂದು ರಕ್ಷಿತಾ ಹೇಳಿದ್ದಾರೆ.
‘ಅಪ್ಪು’ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು. ಜಗನ್ನಾಥ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದರು. ಅಪ್ಪು ಚಿತ್ರದ 100 ದಿನದ ಸಂಭ್ರಮಕ್ಕೆ ರಜನಿಕಾಂತ್ ಬಂದು ಪುನೀತ್‌ಗೆ ಸ್ಮರಣಿಕೆ ಕೊಟ್ಟು. ಕಿರೀಟ ಇಟ್ಟು ಗೌರವಿಸಿದರು. ಅಲ್ಲದೆ, 'ಕನ್ನಡಕ್ಕೆ ಸಿಂಹದ ಮರಿ' ಬಂದಿದೆ ಎಂದೇ ಬಣ್ಣಿಸಿದ್ದರು.
ಅಕ್ಟೋಬರ್ 29 ೨೦೨೧ರಂದು ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸಿನಿಮಾ ಕ್ಷೇತ್ರದ ಯಶಸ್ಸಿನ ಉತ್ತುಂಗದಲ್ಲಿರುವ ಜತೆಗೆ ತಮ್ಮ ವಿನೀತ ನಡೆಯೊಂದಿಗೆ ಜನಮನದ ಹೃದಯಸ್ಥಾಯಿಯಾಗಿದ್ದ ಅವರು ಏಕಾಏಕಿ ಇಹಲೋಕ ತ್ಯಜಿಸಿದ್ದು ಕನ್ನಡ ಚಿತ್ರರಂಗಕ್ಕೆ, ಅಪಾರ ಸಂಖ್ಯೆಯ ಅಭಿಮಾನಿಗಳ ಪಾಲಿನ ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.