ಖ್ಯಾತ ಕಿರುತೆರೆ ನಟ ಹೃದಯಘಾತದಿಂದ ನಿಧನ

ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ಸೋಮವಾರ ರಾತ್ರಿ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ.;

Update: 2024-02-20 08:24 GMT
ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ಹೃದಯಘಾತದಿಂದ ಸಾವನ್ನಪ್ಪಿದರು.
Click the Play button to listen to article

ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ಸೋಮವಾರ (ಫೆಬ್ರವರಿ 19) ರಾತ್ರಿ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಇವರು ಭಾರತೀಯ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದು, ಅನುಪಮಾ , ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ , ಲಾಡೋ 2: ವೀರಪುರ್ ಕಿ ಮರ್ದಾನಿ , ಬೇಂಟೆಹಾ , ಬನೇಗಿ ಅಪ್ನಿ ಬಾತ್ , ಹಿಟ್ಲರ್ ದೀದಿ , ಶಪತ್ , ಅದಾಲತ್ , ಮತ್ತು ದಿಯಾ ಔರ್ ಬಾತಿ ಹಮ್ ಮುಂತಾದ ಜನಪ್ರಿಯ ಟಿವಿ ಸೀರಿಯಲ್‌ಗಳನ್ನು ನಟಿಸಿದ್ದಾರೆ.

ಬದರಿನಾಥ್ ಕಿ ದುಲ್ಹನಿಯಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದು, ಬಂದಿಶ್ ಬ್ಯಾಂಡಿಟ್ಸ್ , ಮೇಡ್ ಇನ್ ಹೆವನ್ ಮತ್ತು ಇಂಡಿಯನ್ ಪೋಲೀಸ್ ಫೋಸ್ಸ್‌ನಂತಹ OTT ಶೋಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಕೆಲವು ದಿನಗಳ ಹಿಂದೆ ಡಿಸ್ಟಾರ್ಜ್‌ ಕೂಡ ಆಗಿದ್ದರು. ಆದರೆ ನಿನ್ನೆ ಹೃದಯಾಘಾತದಿಂದಾಗಿ ರಾತ್ರಿ 12.30 ರ ಸುಮಾರಿಗೆ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ನಟ ಅಮಿತ್ ಬೆಹ್ಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಿಂಗ್ ಅವರಿಗೆ 59 ವರ್ಷ ಆಗಿತ್ತು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Tags:    

Similar News