'ಕಾನ್‌'​​​ನಲ್ಲಿ ಇತಿಹಾಸ ಸೃಷ್ಟಿಸಿದ ಅನಸೂಯಾ ಸೇನ್‌ಗುಪ್ತಾ

ಶುಕ್ರವಾರ ( ಮೇ24) ರಾತ್ರಿ ನಡೆದ ಕಾನ್‌ ಫಿಲ್ಮ್ ಫೆಸ್ಟಿವಲ್ ನಲ್ಲಿ ಅನಸೂಯಾ ಸೇನ್‌ಗುಪ್ತಾ ಅವರು ಉತ್ತಮ ನಟನೆಗೆ ಪ್ರಶಸ್ತಿ ಗೆದ್ದ ಮೊದಲ ಭಾರತೀಯರಾಗಿದ್ದಾರೆ.

Update: 2024-05-25 13:58 GMT
ದಿ ಶೇಮ್‌ಲೆಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅನಸೂಯಾ ಅತ್ಯುತ್ತಮ ನಟಿ ಅನ್ ಸರ್ಟೈನ್ ರಿಗಾರ್ಡ್ ಪ್ರಶಸ್ತಿ ಪಡೆದರು.
Click the Play button to listen to article

ಶುಕ್ರವಾರ ( ಮೇ24) ರಾತ್ರಿ ನಡೆದ ಕಾನ್‌ ಫಿಲ್ಮ್ ಫೆಸ್ಟಿವಲ್ ನಲ್ಲಿ ಅನಸೂಯಾ ಸೇನ್‌ಗುಪ್ತಾ ಅವರು ಉತ್ತಮ ನಟನೆಗೆ ಪ್ರಶಸ್ತಿ ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಗೋವಾದಲ್ಲಿ ನೆಲೆಸಿರುವ ಪ್ರೊಡಕ್ಷನ್ ಡಿಸೈನರ್ ಅನಸೂಯಾ, ದಿ ಶೇಮ್‌ಲೆಸ್ ಎಂಬ ಪ್ರಣಯ-ಆಧಾರಿತ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿಗಾಗಿ ಅನ್ ಸರ್ಟೈನ್ ರಿಗಾರ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

1946ರಲ್ಲಿ ಮೊದಲ ಬಾರಿ ಈ ಚಿತ್ರೋತ್ಸವ ಆರಂಭವಾಗಿದ್ದು, ಕಾನ್‌ ನಲ್ಲಿ ಪ್ರದರ್ಶನ ಕಂಡ ಭಾರತದ ಮೊದಲ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚೇತನ್ ಆನಂದ್ ನಿರ್ದೇಶನದ ನೀಚಾ ನಗರ್ ಅದೇ ವರ್ಷ ಗ್ರ್ಯಾಂಡ್ ಪ್ರೈಝ್ ಆಫ್ ಫೆಸ್ಟಿವಲ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತು.

ಅಲ್ಲಿಂದ ಇಲ್ಲಿಯವರೆಗೆ ಕಾನ್‌ನಲ್ಲಿ ಭಾರತದ ಹಲವಾರು ಸಿನಿಮಾ ಪ್ರದರ್ಶನವಾಗಿವೆ. ಹಲವಾರು ಪ್ರಶಸ್ತಿಗಳನ್ನೂ ಕೂಡ ಗೆದ್ದಿವೆ. ಆದರೆ ಇಲ್ಲಿಯವರೆಗೆ ಕಾನ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಯಾರು ಪಡೆದುಕೊಂಡಿಲ್ಲ. ಇದೀಗ ಅನಸೂಯಾ ಸೇನ್‌ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

ದಿ ಶೇಮ್ ಲೆಸ್ ಚಿತ್ರದಲ್ಲಿನ ಅಭಿನಯಕ್ಕೆ ಕೋಲ್ಕತ್ತಾ ಮೂಲದ ಅನಸೂಯಾ ಸೇನ್‌ಗುಪ್ತಾಗೆ ಈ ಪ್ರಶಸ್ತಿ ಸಿಕ್ಕಿದೆ. ಬಲ್ಗೇರಿಯನ್ ನಿರ್ದೇಶಕ ʻಕಾನ್‌ಸ್ಟಾಂಟಿನ್ ಬೊಜಾನೋವ್ʼ ನಿರ್ದೇಶನದ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯನ್ನ ಕೊಂದು ದೆಹಲಿಯ ವೇಶ್ಯಾಗೃಹದಿಂದ ತಪ್ಪಿಸಿಕೊಳ್ಳುವ ಮಹಿಳೆಯ ಪಾತ್ರವನ್ನ ಅನಸೂಯಾ ನಿರ್ವಹಿಸಿದ್ದಾರೆ.

ಅನಸೂಯಾ ಅವರ ಗೆಲುವು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮಹತ್ವದ ಕ್ಷಣವಾಗಿದೆ. ಇದಕ್ಕೂ ಮುನ್ನ ಮೈಸೂರಿನ ಚಿದಾನಂದ ಎಸ್.ನಾಯಕ್ ನಿರ್ದೇಶನದ ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ ಚಿತ್ರ ಲಾ ಸಿನೆಫ್​​​ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇದೇ ಲಾ ಸಿನೆಫ್ ಸ್ಪರ್ಧೆಯಲ್ಲಿ ಮಾನ್ಸಿ ಮಹೇಶ್ವರಿ ನಿರ್ದೇಶನದ 'ಬನ್ನಿಹುಡ್' ಎಂಬ ಅನಿಮೇಟೆಡ್ ಚಿತ್ರ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ಗ್ರೀಸ್‌ನ ಥೆಸ್ಸಲೋನಿಕಿಯ ಅರಿಸ್ಟಾಟಲ್ ಯೂನಿವರ್ಸಿಟಿಯ ನಿಕೋಸ್ ಕೊಲಿಯೊಕೋಸ್ ನಿರ್ದೇಶನದ 'ದಿ ಚಾಓಸ್ ಶಿ ಲೆಫ್ಟ್ ಬಿಹೈಂಡ್' ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಆಸ್ಯಾ ಸೆಗಾಲೊವಿಚ್​ರ 'ಔಟ್ ಆಫ್ ದಿ ವಿಡೋ ಥ್ರೂ ದಿ ವಾಲ್' ಎರಡನೇ ಸ್ಥಾನ ಹಂಚಿಕೊಂಡಿದೆ.

Tags:    

Similar News