ಬಾಲಿವುಡ್ನಲ್ಲೂ ಯಶಸ್ಸು ಕಂಡ ಕನ್ನಡ ಖ್ಯಾತ ನಿರ್ದೇಶಕ; 'ಬಾಘಿ 4' ಭರ್ಜರಿ ಕಲೆಕ್ಷನ್
ಶುಕ್ರವಾರ ತೆರೆಕಂಡಿದ್ದ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಶನಿವಾರ ಡಲ್ ಆಗಿತ್ತು. ಭಾನುವಾರ ಮತ್ತೆ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ.;
ಬಾಘಿ 4' ಸಿನಿಮಾಗೆ ಕನ್ನಡ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಜನಪ್ರಿಯ ಕನ್ನಡ ನಿರ್ದೇಶಕ ಎ. ಹರ್ಷ ಅವರ ಹಿಂದಿ ಚಿತ್ರ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಘಿ 4 ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು,ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡುತ್ತಿದೆ.
ಶುಕ್ರವಾರ ತೆರೆಕಂಡಿದ್ದ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಶನಿವಾರ ಡಲ್ ಆಗಿತ್ತು. ಭಾನುವಾರ ಮತ್ತೆ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ. ಈ ಸಿನಿಮಾ ಮೊದಲ ದಿನ 13.20 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಚಿತ್ರದ ಕಲೆಕ್ಷನ್ ಶೇ. 22.92 ರಷ್ಟು ಕುಸಿದು 9.25 ಕೋಟಿ ಸಂಗ್ರಹಿಸಿದೆ. ಅದೇ ಸಮಯದಲ್ಲಿ, ಸಕ್ಕನಿಲ್ಕ್‌ನ ಆರಂಭಿಕ ಟ್ರೆಂಡ್ ವರದಿಯ ಪ್ರಕಾರ, 'ಬಾಘಿ 4' ಬಿಡುಗಡೆಯಾದ ಮೂರನೇ ದಿನ ಅಂದರೆ ಭಾನುವಾರ 9 ಕೋಟಿ ಗಳಿಸಿದೆ. ಇದರೊಂದಿಗೆ, 'ಬಾಘಿ 4' ಬಿಡುಗಡೆಯಾದ ಮೂರು ದಿನಗಳಲ್ಲಿ 30 ಕೋಟಿ ರೂಗಳಿಸಿದೆ.
ಈ ಸಿನಿಮಾದಲ್ಲಿ ಟೈಗರ್ ಶ್ರಾಫ್, ಸಂಜಯ್ ದತ್, ಸೋನಮ್ ಬಜ್ವಾ ಮತ್ತು ಹರ್ನಾಜ್ ಸಂಧು ನಟಿಸಿದ್ದಾರೆ. 'ಬಾಘಿ 4' ನಲ್ಲಿ ಟೈಗರ್ ಶ್ರಾಫ್ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಟೈಗರ್ ನಟನೆಯನ್ನು ಸಾಕಷ್ಟು ಪ್ರಶಂಸಿಸಲಾಗುತ್ತಿದೆ. ಹರ್ನಾಜ್ ಸಂಧು ಕೂಡ ತನ್ನ ಚೊಚ್ಚಲ ಚಿತ್ರದಲ್ಲಿ ಅದ್ಭುತ ನಟನೆ ಮಾಡಿದ್ದಾರೆ. ಇದರ ಜೊತೆಗೆ, ಸಂಜಯ್ ದತ್ ಅವರ ಖಳನಾಯಕ ಪಾತ್ರವೂ ತುಂಬಾ ಪ್ರಭಾವಶಾಲಿಯಾಗಿದೆ. ಇದಲ್ಲದೆ 'ಬಾಘಿ 4' ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದು 'ಬಾಘಿ' ಸಿನಿಮಾದ ಸರಣಿಯಾಗಿದ್ದು, 2016 ರಲ್ಲಿ ಬಾಘಿ ಸಿನಿಮಾ ಬಿಡುಗಡೆಯಾಯಿತು.ಬಳಿಕ ಬಾಘಿ 2 (2018) ಮತ್ತು ಬಾಘಿ 3 (2020) ಬಿಡುಗಡೆಯಾಗಿದೆ. ಬಾಘಿ 4 ರಲ್ಲಿ ಟೈಗರ್ ರೋನಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಮಾಜಿ ವಿಶ್ವ ಸುಂದರಿ ಹರ್ನಾಜ್ ಸಂಧು ಅವರಿಗೆ ಚೊಚ್ಚಲ ಚಿತ್ರವಾಗಿದ್ದು, ಸೋನಮ್ ಬಜ್ವಾ, ಶ್ರೇಯಸ್ ತಲ್ಪಡೆ ಮತ್ತು ಸೌರಭ್ ಸಚ್‌ದೇವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕ ಎ. ಹರ್ಷ
ಕನ್ನಡದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದ ಎ. ಹರ್ಷ ಬಳಿಕ ಕನ್ನಡದಲ್ಲಿ 'ಭಜರಂಗಿ', 'ವಜ್ರಕಾಯ', 'ಸೀತಾರಾಮ ಕಲ್ಯಾಣ' ಹಾಗೂ 'ವೇದ' ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಬಳಿಕ ತೆಲುಗಿನ 'ಭೀಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದರಲ್ಲಿ ಅವರ ಕೆಲಸ, ಶ್ರದ್ಧೆ ನೋಡಿ 'ಬಾಘಿ'-4 ಅವಕಾಶ ಕೊಟ್ಟಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.