ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಮಳೆ ಮತ್ತು ಸವಾಲಿನ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡಗಳು ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದರು. ಸಾವಿನ ಸಂಖ್ಯೆ 199 ಎಂದು ಸರ್ಕಾರ ಹೇಳಿದೆ, ಆದರೆ ಬೇರೆ ಮೂಲಗಳ ಪ್ರಕಾರ ಸಾವಿನ ಸಂಖ್ಯೆ 320 ದಾಟಿದೆ ಎಂದು ಹೇಳಲಾಗುತ್ತದೆ. ದುರಂತದಲ್ಲಿ 264 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಕೆಲವು ಕಡೆಗಳಲ್ಲಿ ದೇಹದ ಭಾಗಗಳು ಸಿಕ್ಕಿವೆ, ಇದೀಗ ಅವುಗಳ ಆನುವಂಶಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಭಯವು ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಹೇಳಿಕೆ ನೀಡಿದ್ದಾರೆ.ಪ್ರತಿಕೂಲ ವಾತಾವರಣದ ನಡುವೆಯೂ ಪಡವೆಟ್ಟಿ ಕುನ್ನು ಎಂಬಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಇದರಿಂದ ಆಶದಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. 190 ಅಡಿ ಉದ್ದದ ಬೈಲಿ ಸೇತುವೆಯ ಪೂರ್ಣಗೊಂಡಿಂದರಿಂದ ಶುಕ್ರವಾರ ಮುಂಜಾನೆ ಆರಂಭವಾದ 40 ತಂಡಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯಕವಾಗಿದೆ. ಅತ್ಯಂತ ಕೆಟ್ಟ ಪರಿಸ್ಥಿತಿ ಇರುವ ಮುಂಡಕ್ಕೆ ಮತ್ತು ಚೂರಲ್ಮಲಾ ಕುಗ್ರಾಮಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬ್ಯುಲೆನ್ಸ್ಗಳು ಸೇರಿದಂತೆ ಭಾರೀ ಯಂತ್ರಗಳ ಕೊಂಡಯ್ಯಬಹುದಾಗಿದೆ.6 ವಲಯಗಳಲ್ಲಿ 40 ತಂಡಗಳುಬೆಳಿಗ್ಗೆ 7 ಗಂಟೆಗೆ ಶ್ವಾನದಳಗಳೊಂದಿಗೆ ರಕ್ಷಕರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ - ಅಟ್ಟಮಲ ಮತ್ತು ಆರಣಮಲ, ಮುಂಡಕ್ಕೆ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್ಎಸ್ಎಸ್ ವೆಳ್ಳರಿಮಲ, ಮತ್ತು ನದಿ ದಂಡೆ.ಜಂಟಿ ತಂಡಗಳಲ್ಲಿ ಸೇನೆ, ಎನ್ಡಿಆರ್ಫ್, ಡಿಎಸ್ಜಿ, ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿ ಮತ್ತು ಮೂವರು ಸ್ಥಳೀಯರು ಮತ್ತು ಒಬ್ಬ ಅರಣ್ಯ ಇಲಾಖೆ ಉದ್ಯೋಗಿ ಇದ್ದಾರೆ.