Wayanad Landslide | ಸಾವಿನ ಸಂಖ್ಯೆ 320ಗೆ ಏರಿಕೆ: ಕಾಂಗ್ರೆಸ್ 100 ಮನೆಗಳನ್ನು ನಿರ್ಮಿಸುತ್ತದೆ- ರಾಹುಲ್ ಗಾಂಧಿ

ಭೂಕುಸಿತ ಪೀಡಿತ ಪ್ರದೇಶದ 6 ವಲಯಗಳಲ್ಲಿ ಭೂಸೇನೆ, ಎನ್‌ಡಿಆರ್‌ಎಫ್, ಡಿಎಸ್‌ಜಿ, ಕೋಸ್ಟ್‌ ಗಾರ್ಡ್, ನೌಕಾಪಡೆ, ಎಂಇಜಿ, ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.;

Update: 2024-08-02 05:21 GMT
Rescue operation underway in Wayanad. Photo: PTI

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಮಳೆ ಮತ್ತು ಸವಾಲಿನ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡಗಳು  ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದರು. ಸಾವಿನ ಸಂಖ್ಯೆ 199 ಎಂದು ಸರ್ಕಾರ ಹೇಳಿದೆ, ಆದರೆ ಬೇರೆ ಮೂಲಗಳ ಪ್ರಕಾರ ಸಾವಿನ ಸಂಖ್ಯೆ 320  ದಾಟಿದೆ ಎಂದು ಹೇಳಲಾಗುತ್ತದೆ. ದುರಂತದಲ್ಲಿ 264 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲವು ಕಡೆಗಳಲ್ಲಿ ದೇಹದ  ಭಾಗಗಳು ಸಿಕ್ಕಿವೆ, ಇದೀಗ ಅವುಗಳ ಆನುವಂಶಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಭಯವು  ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಪ್ರತಿಕೂಲ ವಾತಾವರಣದ ನಡುವೆಯೂ ಪಡವೆಟ್ಟಿ ಕುನ್ನು ಎಂಬಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಇದರಿಂದ ಆಶದಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. 190 ಅಡಿ ಉದ್ದದ ಬೈಲಿ ಸೇತುವೆಯ ಪೂರ್ಣಗೊಂಡಿಂದರಿಂದ ಶುಕ್ರವಾರ ಮುಂಜಾನೆ ಆರಂಭವಾದ 40 ತಂಡಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯಕವಾಗಿದೆ.  ಅತ್ಯಂತ ಕೆಟ್ಟ ಪರಿಸ್ಥಿತಿ ಇರುವ ಮುಂಡಕ್ಕೆ ಮತ್ತು ಚೂರಲ್‌ಮಲಾ ಕುಗ್ರಾಮಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬ್ಯುಲೆನ್ಸ್‌ಗಳು ಸೇರಿದಂತೆ ಭಾರೀ ಯಂತ್ರಗಳ ಕೊಂಡಯ್ಯಬಹುದಾಗಿದೆ.

6 ವಲಯಗಳಲ್ಲಿ 40 ತಂಡಗಳು

ಬೆಳಿಗ್ಗೆ 7 ಗಂಟೆಗೆ ಶ್ವಾನದಳಗಳೊಂದಿಗೆ ರಕ್ಷಕರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ - ಅಟ್ಟಮಲ ಮತ್ತು ಆರಣಮಲ, ಮುಂಡಕ್ಕೆ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್‌ ವೆಳ್ಳರಿಮಲ, ಮತ್ತು ನದಿ ದಂಡೆ.

ಜಂಟಿ ತಂಡಗಳಲ್ಲಿ ಸೇನೆ, ಎನ್‌ಡಿಆರ್‌ಫ್‌, ಡಿಎಸ್‌ಜಿ, ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿ ಮತ್ತು ಮೂವರು ಸ್ಥಳೀಯರು ಮತ್ತು ಒಬ್ಬ ಅರಣ್ಯ ಇಲಾಖೆ ಉದ್ಯೋಗಿ ಇದ್ದಾರೆ.

Live Updates
2024-08-02 11:53 GMT

205 ಮಂದಿ ಸಾವು; 264 ಮಂದಿ ಗಾಯ: ವಯನಾಡ್ ಜಿಲ್ಲಾಡಳಿತದ ಮಾಹಿತಿ

ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 205 ಜನರು ಸಾವನ್ನಪ್ಪಿದಾರ ಮತ್ತು 264 ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾಡಳಿತ ಶುಕ್ರವಾರ ತಿಳಿಸಿದೆ.

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 28 ಮಕ್ಕಳು ಸೇರಿದಂತೆ 205 ಮೃತದೇಹಗಳು ಪತ್ತೆಯಾಗಿವೆ. ಹೆಚ್ಚುವರಿಯಾಗಿ, 133 ದೇಹದ ಭಾಗಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ. ಇದುವರೆಗೆ ದೇಹದ ಅಂಗಾಂಗಗಳು ಸೇರಿದಂತೆ 328 ಶವಪರೀಕ್ಷೆಗಳನ್ನು ನಡೆಸಲಾಗಿದ್ದು, 116 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅದು ತಿಳಿಸಿದೆ.

ಅಲ್ಲದೆ, ದುರಂತದಲ್ಲಿ 264 ಜನರು ಗಾಯಗೊಂಡಿದ್ದು, ಅವರಲ್ಲಿ 177 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ, ಇಬ್ಬರನ್ನು ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿದೆ ಮತ್ತು 85 ಜನರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.

2024-08-02 11:24 GMT

ವಯನಾಡ್‌ನಲ್ಲಿ ಸೇನೆಯ ಶ್ವಾನದಳಗಳು ಕರ್ತವ್ಯ ನಿರ್ವಹಿಸುತ್ತಿವೆ

2024-08-02 11:23 GMT

ಕಾಂಗ್ರೆಸ್ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಿದೆ: ರಾಹುಲ್ ಗಾಂಧಿ

2024-08-02 08:07 GMT

ರಕ್ಷಣಾ ಕಾರ್ಯಾಚರಣೆ ಉತ್ತಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ: ಸಚಿವ ಎ.ಕೆ.ಸಶೀಂದ್ರನ್


2024-08-02 08:06 GMT

2024-08-02 07:47 GMT

ಜುಲೈ 18 ಮತ್ತು 25 ರಂದು ಎಚ್ಚರಿಕೆ ನೀಡಲಾಗಿದೆ: ಬಿಜೆಪಿ ಮುಖಂಡ ಮುರಳೀಧರನ್

2024-08-02 07:46 GMT

ರಕ್ಷಿಸಲಾದ ನಾಲ್ವರನ್ನು ಮೂಲ ಶಿಬಿರಕ್ಕೆ ಸ್ಥಳಾಂತರ

ಮುಂಡಕ್ಕೆಯಿಂದ ಸುಮಾರು ಒಂದು ಕಿಲೋಮೀಟರ್ ಎತ್ತರದಲ್ಲಿರುವ ಪಡವಟ್ಟಿ ಕುನ್ನು ಎಂಬಲ್ಲಿ 80 ಗಂಟೆಗಳ ನಂತರ ನಾಲ್ವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಕೆಸರು ಮತ್ತು ಅವಶೇಷಗಳ ಹರಿವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಗುಂಪು ಸಿಲುಕಿಕೊಂಡಿತು. ಬದುಕುಳಿದ ನಾಲ್ವರು ಜಾನ್, ಜೋಮೋಲ್, ಅಬ್ರಹಾಂ ಮತ್ತು ಕ್ರಿಸಿ, ಇಂದು ಬೆಳಗ್ಗೆ ಶೋಧ ಮತ್ತು ರಕ್ಷಣಾ ತಂಡ ಅವರನ್ನು ಪತ್ತೆ ಮಾಡಿದೆ. ಅವರನ್ನು ಮೂಲ ಶಿಬಿರಕ್ಕೆ ಸ್ಥಳಾಂತರಿಸಲು ಸಜ್ಜಾಗಿದೆ.

2024-08-02 07:44 GMT

ಇಂದು ಚೂರಲ್ಮಲಾ ಭೂಕುಸಿತ ಪ್ರದೇಶಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ

2024-08-02 07:43 GMT

ಶ್ವಾನದಳ ಶೋಧ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸುತ್ತಿದೆ

2024-08-02 07:42 GMT

Tags:    

Similar News