4ನೇ ಟೆಸ್ಟ್: ಮಿಂಚಿದ ಅಶ್ವಿನ್, ಕುಲದೀಪ್. ಸರಣಿ ವಶಕ್ಕೆ ಭಾರತಕ್ಕೆ 152 ರನ್‌ ಅಗತ್ಯ

Update: 2024-02-25 12:27 GMT
ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (5/51) ಮತ್ತು ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ (4/22) ಒಂಬತ್ತು ವಿಕೆಟ್‌ಗಳನ್ನು ಹಂಚಿಕೊಂಡರು.

ರಾಂಚಿ, ಫೆ.25- ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೂರನೇ ದಿನ 192 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. 

ಸೋಮವಾರ ಅಗತ್ಯವಿರುವ 152 ರನ್‌ ಗಳಿಸಿದರೆ, ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-1 ಮುನ್ನಡೆ ಸಾಧಿಸಲಿದೆ.

 ದಿನದ ಆಟದ ಮುಕ್ತಾಯದ ವೇಳೆಗೆ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರಮವಾಗಿ 24 ಮತ್ತು 16 ರನ್ ಗಳಿಸಿ ಆಟವಾಡುತ್ತಿದ್ದರು. 

ನಿಧಾನಗತಿಯ ಬೌಲರ್‌ಗಳಿಗೆ ಸಾಕಷ್ಟು ಸಹಾಯವನ್ನು ನೀಡುವ ಪಿಚ್‌ನಲ್ಲಿ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (5/51) ಮತ್ತು ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ (4/22), ಒಂಬತ್ತು ವಿಕೆಟ್‌ಗಳನ್ನು ಹಂಚಿಕೊಂಡರು. ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ ನಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ಅಶ್ವಿನ್-ಕುಲದೀಪ್ ಜೋಡಿ ತಮ್ಮಕೈಚಳಕ ತೋರಿಸುವ ಮೊದಲು, ಯುವ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್ 90 ರನ್ ಗಳಿಸಿದರು.

ಎಂಟನೇ ವಿಕೆಟ್‌ಗೆ ಕುಲದೀಪ್ (28) ಅವರೊಂದಿಗೆ 76 ರನ್‌ ಸೇರಿಸಿ, 177 ರನ್‌ ಗೆ 7 ವಿಕೆಟ್‌ ಕಳೆದುಕೊಂಡಿದ್ದ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು. ನಂತರ ಆಕಾಶ್ ದೀಪ್ ಅವರೊಂದಿಗೆ ಮತ್ತೊಂದು 40 ರನ್ ಗಳಿಸಿ ತಂಡವನ್ನು 300 ಕ್ಕೆ ಸಮೀಪಿಸಲು ನೆರವಾದರು.

ಭಾರತದ ಮೊದಲ ಇನ್ನಿಂಗ್ಸ್ 307 ಕ್ಕೆ ಕೊನೆಗೊಂಡಿತು. ಪ್ರವಾಸಿಗರಿಗೆ 46 ರನ್‌ಗಳ ಮುನ್ನಡೆ ಸಿಕ್ಕಿತು.

Tags:    

Similar News