ಉಟಕ್ಕೆ ಬಿಲ್‌ ಆಗಿದ್ದು ಎರಡು ಕೋಟಿ, ಬಿಬಿಎಂಪಿ ಅಧಿಕಾರಿ ನೀಡಿದ್ದು ಒಂಭತ್ತು ಕೋಟಿ

ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ 9,72,21,787 ರೂಪಾಯಿಗಳನ್ನು ಪಾವತಿಸಿದ್ದು ಖಾಸಗಿ ಕಂಪನಿಗೆ ಹೆಚ್ಚುವರಿಯಾಗಿ 7,00,12,396 ರೂಪಾಯಿ ಪಾವತಿಸಿದ್ದಾರೆ.;

Update: 2025-05-17 05:38 GMT

ಅಧಿಕಾರಿ ಅಮಾನತು ಮಾಡಿ ಆದೇಶ ಹೋರಡಿಸಿರುವ ಪತ್ರ

ಬಿಬಿಎಂಪಿ ಅಧಿಕಾರಿಯೊಬ್ಬರ ಎಡವಟ್ಟಿನಿಂದಾಗಿ ಕಂಪೆನಿಗೆ ನೀಡಬೇಕಾಗಿದ್ದ ಎರಡು ಕೋಟಿ ಬದಲಾಗಿ ಒಂಭತ್ತು ಕೋಟಿ ರೂಪಾಯಿ ಪಾವತಿ ಮಾಡಿದ್ದು ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ ಏಳು ಕೋಟಿ ರೂಪಾಯಿ ನಷ್ಟವಾಗಿದೆ. ಈಗ ತನ್ನ ಎಡವಟ್ಟಿಗಾಗಿ ಆರೋಗ್ಯ ಅಧಿಕಾರಿ ಅಮಾನತು ಶಿಕ್ಷೆಗೆ  ಒಳಗಾಗಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಅಮಾನತಾದ ಅಧಿಕಾರಿ. ಇವರನ್ನು ಬೆಂಗಳೂರು ದಕ್ಷಿಣ ಆರೋಗ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿತ್ತು. ಚಿಫ್‌ಟಾಕ್‌ ಪುಡ್‌ ಅಂಡ್‌ ಹಾಸ್ಪಿಟಾಲಿಟಿ ಸರ್ವಿಸ್‌ ಪ್ರೈವೆಟ್‌ ಲಿಮಿಟೆಡ್‌ ರವರು ಅಧಿಕಾರಿಗೆ ಬಿಲ್ಲಿನ ಮೊತ್ತವನ್ನು ಪಾವತಿಸಲು ಕೋರಿದ್ದಾರೆ. ವರದಿಯ ಪ್ರಕಾರ ಕಂಪನಿಗೆ 2,27,34,474 ರೂಪಾಯಿ ಪಾವತಿಸಬೇಕಾಗಿತ್ತು.

ಆದರೆ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ 9,72,21,787 ರೂಪಾಯಿಗಳನ್ನು ಪಾವತಿಸಿದ್ದು ಕಂಪನಿಗೆ ಹೆಚ್ಚುವರಿಯಾಗಿ 7,00,12,396 ರೂಪಾಯಿ ಪಾವತಿಸಿದ್ದಾರೆ. ಅಧಿಕಾರಿಯು ಸರ್ಕಾರಿ ನಡತೆ ನಿಯಮಾವಳಿಯನ್ನು ಉಲ್ಲಂಘಿಸಿ ಗಂಭೀರ ಕರ್ತವ್ಯ ಲೋಪವೆಸಗಿರುವ ಕಾರಣ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

Tags:    

Similar News