Shiva Rajkumar| ಡಾಕ್ಯುಮೆಂಟರಿ ಆಗಲಿದೆ ಶಿವರಾಜ್‌ ಕ್ಯಾನ್ಸರ್‌ ಹೋರಾಟದ ಕಥನ

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಈ ಡಾಕ್ಯುಮೆಂಟರಿ ಉದ್ದೇಶ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.;

Update: 2025-03-10 12:59 GMT

ನಟ ಡಾ.ಶಿವರಾಜ್‌ ಕುಮಾರ್‌

ನಟ ಶಿವರಾಜ್‌ಕುಮಾರ್‌ ಅವರು ಇತ್ತೀಚೆಗೆ ಅಮೆರಿಕಾಕ್ಕೆ ತೆರಳಿ ಯಶಸ್ವಿಯಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಮರಳಿದ್ದಾರೆ. ಇದೀಗ ತಾವು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿರುವ ಹಾದಿ ಹಾಗೂ ತಾವು ಅನುಭವಿಸಿರುವ ನೋವು, ಚಿಕಿತ್ಸಾ ಕ್ರಮಗಳ ಕುರಿತು ಈ ಡಾಕ್ಯುಮೆಂಟರಿ ತಯಾರಾಗಲಿದೆ.  

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಈ ಡಾಕ್ಯುಮೆಂಟರಿ ಉದ್ದೇಶ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಪ್ರಸ್ತುತ ಶಿವರಾಜ್‌ ಕುಮಾರ್‌, ತೆಲುಗು ನಟ ರಾಮ್ ಚರಣ್ ಅಭಿನಯದ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರ ಮುಗಿಸಿ ಡಾಕ್ಯುಮೆಂಟರಿ ಕಡೆ ಗಮನ ಹರಿಸಲಿದ್ದಾರೆ. ಆದರೆ, ಈ ಡಾಕ್ಯುಮೆಂಟರಿ ನಿರ್ದೇಶನ ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲಿದ್ದ ಶಿವರಾಜ್‌ಕುಮಾರ್‌,  2024ರ ಡಿ.18ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ತೆರಳಿದ್ದರು. ಡಿ. 24ರಂದು ಮಿಯಾಮಿಯ ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತ್ತು. 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡು 2025ರ ಜ. 26ರಂದು ಬೆಂಗಳೂರಿಗೆ ಮರಳಿದ್ದರು. 

Tags:    

Similar News