Gold Smuggling | ಚಿನ್ನ ಖರೀದಿ- ಮಾರಾಟಕ್ಕೆ ದುಬೈನಲ್ಲಿ ಕಂಪನಿ ತೆರೆದಿದ್ದ ರನ್ಯಾರಾವ್
ದುಬೈಗೆ ಚಿನ್ನವನ್ನು ಆಮದು ಮಾಡಿಕೊಳ್ಳುವುದು ಮತ್ತು ಚಿನ್ನವನ್ನು ಮಾರಾಟ ಮಾಡುವುದು ಈ ವ್ಯವಹಾರದ ಉದ್ದೇಶವಾಗಿತ್ತು. ದುಬೈ ವ್ಯವಹಾರದಲ್ಲಿ ರನ್ಯಾ ಏಕೈಕ ಹೂಡಿಕೆದಾರರಾಗಿದ್ದರು.;
ಬಂಧಿತನಾಗಿರುವ ನಟಿ ರನ್ಯಾ ಆಪ್ತ ಸ್ನೇಹಿತ ತರುಣ್ ರಾಜ್ ತೆಲುಗು ನಟ.
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತರುಣ್ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗಗೊಂಡಿವೆ. ಚಿನ್ನ ಮಾರಾಟ ಹಾಗೂ ಚಿನ್ನ ಖರೀದಿಸಲು ದುಬೈನಲ್ಲಿ ಕಂಪೆನಿಯೊಂದನ್ನು ತೆರೆಯಲಾಗಿತ್ತು ಎಂಬ ಮಾಹಿತಿ ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬಹಿರಂಗಗೊಂಡಿದೆ.
ನಟಿ ರನ್ಯಾ ರಾವ್ ಮತ್ತು ತರುಣ್ ಕಾಲೇಜು ದಿನಗಳಿಂದಲೇ ಸ್ನೇಹಿತರಾಗಿದ್ದು, ಬಳಿಕ ಇಬ್ಬರೂ ಸೇರಿ 2023ರಲ್ಲಿ ದುಬೈನಲ್ಲಿ 50:50 ಪಾಲುದಾರಿಕೆಯಲ್ಲಿ ʻವೀರಾ ಡೈಮಂಡ್ಸ್ ಟ್ರೇಡಿಂಗ್ LLC ʼಎಂಬ ಹೆಸರಿನ ಕಂಪನಿ ಆರಂಭಿಸಿದ್ದರು. ದುಬೈಗೆ ಚಿನ್ನವನ್ನು ಆಮದು ಮಾಡಿಕೊಳ್ಳುವುದು ಮತ್ತು ಚಿನ್ನವನ್ನು ಮಾರಾಟ ಮಾಡುವುದು ಈ ವ್ಯವಹಾರದ ಉದ್ದೇಶವಾಗಿತ್ತು. ದುಬೈ ವ್ಯವಹಾರದಲ್ಲಿ ರನ್ಯಾ ಏಕೈಕ ಹೂಡಿಕೆದಾರರಾಗಿದ್ದರು. ತರುಣ್ ಕಾರ್ಯನಿರತ ಪಾಲುದಾರರಾಗಿದ್ದರು. ದುಬೈನಲ್ಲಿ ಡೀಲರ್ಗಳಿಗೆ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಓರ್ವ ಡೀಲರ್ ಒಮ್ಮೆ ದುಬೈನಲ್ಲಿ ಚಿನ್ನವನ್ನು ಪೂರೈಸದಿದ್ದರಿಂದ 1.7 ಕೋಟಿ ರೂ. ಮೋಸ ಹೋಗಿದ್ವಿ. 1.7 ಕೋಟಿ ಹಣವನ್ನು ರನ್ಯಾ ರಾವ್ ಭಾರತದಿಂದ ದುಬೈಗೆ ಹವಾಲಾ ಮೂಲಕ ತರಿಸಿದ್ದರು. ರನ್ಯಾ ರಾವ್ಗೆ ತನ್ನ ಕುಟುಂಬದ ಸಂಪರ್ಕದ ಮೂಲಕ ಜಿನೇವಾ ಮತ್ತು ಬ್ಯಾಂಕಾಕ್‌ನಲ್ಲಿ ಡೀಲರ್ಗಳ ಪರಿಚಯ ಇದೆ. ರನ್ಯಾ ರಾವ್ ಚಿನ್ನವನ್ನು ಖರೀದಿಸುತ್ತಿದ್ದಳು, ಕಸ್ಟಮ್ಸ್ ಅಧಿಕಾರಿಗಳ ಬಳಿ ಜಿನೇವಾಗೆ ತೆಗೆದುಕೊಂಡು ಹೋಗುತ್ತೇನೆ ಎಂದು ನನ್ನ ಹೆಸರಲ್ಲಿ ಡಿಕ್ಲರೇಷನ್ ಕೊಡುತ್ತಿದ್ದಳು. ಏಪ್ರಿಲ್ 2024 ರಿಂದ ಜಿನೇವಾ ಅಥವಾ ಬ್ಯಾಂಕಾಕ್‌ನಿಂದ ಚಿನ್ನವನ್ನು ಖರೀದಿಸಲಾಗಿದೆ. ರನ್ಯಾ ತನ್ನ HDFC ಬ್ಯಾಂಕ್ ಮೂಲಕ VIRA DIAMONDS ಕಂಪನಿ ರಚನೆಗಾಗಿ 8-10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾಳೆ ಎಂದು ತರುಣ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಡಿಆರ್‌ಐ ಅಧಿಕಾರಿಗಳಿಂದ ತಿಳಿದುಬಂದಿದೆ.