ನಿವೃತ್ತಿ ಹಣ ತೆಗೆದುಕೊಂಡು ಬರುತ್ತಿದ್ದ ಶಿಕ್ಷಕನನ್ನು ಕೊಲೆ ಮಾಡಿ ಹಣ ದೋಚಿದ ಕಳ್ಳರು
ಬ್ಯಾಂಕ್‌ನಲ್ಲಿದ್ದ ತಮ್ಮ ನಿವೃತ್ತಿ ಹಣವನ್ನು ವಿತ್‌ಡ್ರಾ ಮಾಡಿ ಮರಳುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹಣವನ್ನು ದೋಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಡೆದಿದೆ.;
ಮನೆ ಕಟ್ಟುವ ಉದ್ದೇಶದಿಂದ ಬ್ಯಾಂಕ್‌ನಲ್ಲಿದ್ದ ತಮ್ಮ ನಿವೃತ್ತಿ ಹಣವನ್ನು ವಿತ್‌ಡ್ರಾ ಮಾಡಿ ಮರಳುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹಣವನ್ನು ದೋಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಡೆದಿದೆ.
ಹನುಮಂತರಾಯಪ್ಪ ಎಂಬುವರು ಕೊಲೆಯಾಗಿದ್ದು, ಇವರು ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ಮನೆಯನ್ನು ಕಟ್ಟಿಸುತ್ತಿದ್ದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿಯ ಬ್ಯಾಂಕ್‌ನಿಂದ ಸುಮಾರು ಮೂರು ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಒಂದಷ್ಟು ವಸ್ತುಗಳನ್ನು ಖರೀದಿಸಿ ಹೊರಟಿದ್ದರು. ಬ್ಯಾಂಕ್‌ನಿಂದ ಅವರನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್‌ನಿಂದ ಅವರು ಕೆಳಗೆ ಬೀಳುತ್ತಿದ್ದಂತೆ ದೊಣ್ಣೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾನೆ.
ಕೊಲೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ.
ಮೃತ ಹನುಮಂತರಾಯಪ್ಪ ತಮ್ಮ ಏಕೈಕ ಪುತ್ರಿ ಹೇಮಲತಾಗೆಂದು ತಮ್ಮ ನಿವೃತ್ತಿಯಿಂದ ಬಂದಿದ್ದ ಹಣದಲ್ಲಿ ಮನೆ ಕಟ್ಟಿಸಿ ಕೊಡುತ್ತಿದ್ದರು. ದೊಡ್ಡಬಳ್ಳಾಪುರದ ಕುರುಬರಹಳ್ಳಿಯಲ್ಲಿ ಮನೆ ಕಟ್ಟಲು ಪಾಯ ಹಾಕಲಾಗಿತ್ತು.