ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಕತ್ರಿನಾ ಕೈಫ್: ಸರ್ಪ ಸಂಸ್ಕಾರ ವಿಶೇಷ ಪೂಜೆ
ನಾಗ ದೋಷ ಇದ್ದರೆ ಮದುವೆಯಾಗಲು ಹಾಗೂ ಮಗುವಾಗಲು ಸಮಸ್ಯೆ ಇರುತ್ತದೆ. ಹೀಗಾಗಿ ಭಕ್ತರು ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸರ್ಪ ಸಂಸ್ಕಾರ ಮಾಡಿ ಪರಿಹಾರ ಮಾಡಿಕೊಳ್ಳುತ್ತಾರೆ.;
ನಟಿ ಕತ್ರಿನಾ ಕೈಫ್
ಬಾಲಿವುಡ್ ನಟಿ ಕತ್ರಿನಾ ಕೈಫ್, ದಕ್ಷಿಣ ಜಿಲ್ಲೆಯ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೋಮವಾರ ತಡರಾತ್ರಿ ಆಗಮಿಸಿದ್ದು, ಮಂಗಳವಾರ (ಮಾರ್ಚ್ 11) ಮತ್ತು ಬುಧವಾರ (ಮಾರ್ಚ್ 12) ಕ್ಷೇತ್ರದಲ್ಲೇ ಇದ್ದು ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಕತ್ರಿನಾ ಕೈಫ್ ಅವರು ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದು, ನಾಳೆಯ ಸರ್ಪ ಸಂಸ್ಕಾರ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ. ಸರ್ಪ ಸಂಸ್ಕಾರವನ್ನು ಸಾಂಪ್ರದಾಯಿಕವಾಗಿ ಕ್ಷೇತ್ರದ ವಿಧಿವಿಧಾನಗಳಂತೆ ನೆರವೇರಿಸಲಾಗುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ನಾಗ ದೋಷ ಇದ್ದರೆ ಮದುವೆ ಸಂಬಂಧ ಕೂಡಿ ಬರಲು ಹಾಗೂ ಮದುವೆಯಾದ ಮೇಲೆ ಸಂತಾನವಾಗಲು ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಅನೇಕರು ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸರ್ಪ ಸಂಸ್ಕಾರ ಮಾಡಿಕೊಂಡು ಪರಿಹಾರ ಮಾಡಿಕೊಳ್ಳುತ್ತಾರೆ. ಅಂತೆಯೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ವಿಶೇಷ ಪೂಜೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸುಬ್ರಹ್ಮಣ್ಯದಲ್ಲಿ ನಟಿ ಕತ್ರಿನಾ ಕೈಫ್ ದೇವರ ದರ್ಶನಕ್ಕೆ ತೆರಳುತ್ತಿರುವ ಕೆಲವು ಫೋಟೋಗಳು ವೈರಲ್ ಆಗಿವೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮುಖ್ಯವಾಗಿ ಹೆಸರಾಗಿರುವುದೇ ನಾಗ ದೋಷ ಸಂಬಂಧಿ ಪೂಜೆಗಳಿಗಾಗಿ. ಅದರಲ್ಲೂ ಆಶ್ಲೇಷ ಬಲಿ ಹಾಗೂ ಸರ್ಪ ಸಂಸ್ಕಾರ ಇಲ್ಲಿ ನಡೆಸಿದಾಗ ಮಾತ್ರ ನಿಜವಾದ ಫಲ ಸಿಗುವುದು ಎಂಬ ನಂಬಿಕೆ ಇದೆ. ನಾಗರ ಹಾವನ್ನು ಸಾಯಿಸಿದರೆ, ಅಥವಾ ಅದು ಸತ್ತು ಬಿದ್ದಿದ್ದನ್ನು ನೋಡಿದರೆ ಅದಕ್ಕೆ ಸಂಪೂರ್ಣ ಸಂಸ್ಕಾರ ಕ್ರಿಯೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಸರ್ಪಹತ್ಯೆ ದೋಷ ಉಂಟಾಗುತ್ತದೆ ಎಂಬ ನಂಬಿಕೆಯಿದ್ದು. ಸರ್ಪ ಸಂಸ್ಕಾರ ನಡೆಸಬೇಕಾಗುತ್ತದೆ ಎಂಬ ನಂಬಿಕೆ ಇದೆ.