CET Exams | ಸಿಇಟಿ: ಏ.18 ಪರೀಕ್ಷೆ ದಿನಾಂಕ ಬದಲಿಸಲು ಐವನ್‌ ಡಿಸೋಜಾ ಆಗ್ರಹ

ಏಪ್ರಿಲ್ 18 ರಂದು ಗುಡ್ ಫ್ರೈಡೇ. ಗುಡ್ ಫ್ರೈಡೇ ಸರ್ಕಾರಿ ರಜಾದಿನ ಎಂಬುದಾಗಿ ತಿಳಿದಿದ್ದರೂ, ಅಧಿಕಾರಿಗಳು ಅಂದೇ ಪರೀಕ್ಷೆಯನ್ನು ನಿಗದಿ ಮಾಡಿದ್ದಾರೆ.;

Update: 2025-03-12 06:36 GMT

ಐವನ್ ಡಿಸೋಜಾ 

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏಪ್ರಿಲ್ 16, 17 ಮತ್ತು 18 ರಂದು ಸಿಇಟಿ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ. ಆದರೆ, ಈ ಬಾರಿ ಏ.18 ರಂದೇ ಗುಡ್‌ ಫ್ರೈಡ್‌ ಇರುವುದರಿಂದಾಗಿ ಅಂದಿನ ಪರೀಕ್ಷೆಯನ್ನು ಕ್ರೈಸ್ತ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮುಂದೂಡಬೇಕು ಎಂದು ಕಾಂಗ್ರೆಸ್‌ನ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನದ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಏಪ್ರಿಲ್ 18 ರಂದು ಗುಡ್ ಫ್ರೈಡೇ. ಗುಡ್ ಫ್ರೈಡೇ ಸರ್ಕಾರಿ ರಜಾದಿನ ಎಂಬುದಾಗಿ ತಿಳಿದಿದ್ದರೂ, ಅಧಿಕಾರಿಗಳು ಅಂದೇ ಪರೀಕ್ಷೆಯನ್ನು ನಿಗದಿ ಮಾಡಿದ್ದಾರೆ. ಆದ್ದರಿಂದ, ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. 

ಏಪ್ರಿಲ್ 18 ರಂದು ಗಡಿನಾಡು ಮತ್ತು ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ 2,537 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 115 ಮಂದಿ ಕ್ರೈಸ್ತ ವಿದ್ಯಾರ್ಥಿಗಳಾಗಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದ್ದು, ಮೇ 4 ರಂದು ನೀಟ್ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಕೆಇಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Tags:    

Similar News