Weather Update | ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಮೂರು ಜಿಲ್ಲೆಗಳಿಗೆ ಫೆಬ್ರವರಿ 28 ಮತ್ತು ಮಾರ್ಚ್ 1ರಂದು (ಮುಂದಿನ 48 ಗಂಟೆ) ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರಲಿದೆ. ಹೀಗಾಗಿ ಎರಡು ದಿನ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.;
ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಮೂರು ಜಿಲ್ಲೆಗಳಿಗೆ ಫೆಬ್ರವರಿ 28 ಮತ್ತು ಮಾರ್ಚ್ 1ರಂದು (ಮುಂದಿನ 48 ಗಂಟೆ) ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರಲಿದೆ. ಹೀಗಾಗಿ ಎರಡು ದಿನ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ರಾಜ್ಯದ ಕರಾವಳಿಯಲ್ಲಿ ಗಾಳಿಯ ತೇವಾಂಶ (ಸಾಪೇಕ್ಷ ಆರ್ದ್ರತೆ) ಶೇ. 40-50ರಷ್ಟಿದ್ದು, ಗರಿಷ್ಠ ಉಷ್ಣತೆ 37 ರಿಂದ 38 ಡಿಗ್ರಿ ಸೆಲ್ಸಿಯಸ್ ಆಸುಪಾಸು ದಾಖಲಾಗಲಿದೆ. ಮಾನವ ದೇಹವು ಗರಿಷ್ಠ 40-50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ತಡೆದುಕೊಳ್ಳುತ್ತದೆ. ಈ ಪ್ರಮಾಣ ದಾಟಿದರೆ, ಆ ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾಗಬಹುದು. ಜೀವಕ್ಕೆ ಅಪಾಯ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಫೆಬ್ರವರಿ 26ರಂದು ಬುಧವಾರ ಕಾರವಾರದಲ್ಲಿ 38 ಡಿಗ್ರಿ ಸೆಲ್ಸಿಯಸ್, ಪೆಣಂಬೂರು 38, ಹೊನ್ನಾವರ 38.2 ಮತ್ತು ಮಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಉಷ್ಣ ಅಲೆ ಕಂಡು ಬಂದಿದೆ. ಇದು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ವಾತಾವರಣ ಕರಾವಳಿ ಭಾಗದಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.