ಮಹಿಳೆ ಮೇಲೆ ಹಲ್ಲೆ ಆರೋಪ: ಮಾಜಿ ಸಚಿವ ಎಚ್​ ಎಂ ರೇವಣ್ಣ ವಿರುದ್ಧ ದೂರು ದಾಖಲು

ಮಾತಾಡುವಾಗ ನನ್ನ ಮೊಬೈಲ್ ಕಸಿದುಕೊಂಡು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.;

Update: 2025-03-18 11:07 GMT

ಹೆಚ್​ಎಂ ರೇವಣ್ಣ

ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಜಿ ಸಚಿವ ಎಚ್.ಎಂ.ರೇವಣ್ಣ ವಿರುದ್ಧ ಕೇಳಿಬಂದಿದ್ದು, ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಮಧ್ಯಾಹ್ನ 3:30ರ ಸುಮಾರಿಗೆ ರೇವಣ್ಣ ಊಟ ಮಾಡುತ್ತಿದ್ದರು. ಈ ವೇಳೆ ಅವರನ್ನು ಭೇಟಿಯಾಗಲು ನಾನು ಹೋಗಿದ್ದೆ. ಮಾತಾಡುವಾಗ ನನ್ನ ಮೊಬೈಲ್ ಕಸಿದುಕೊಂಡು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ರೇವಣ್ಣ ಮಹಿಳೆಯ ಮೊಬೈಲ್ ಕಸಿದುಕೊಳ್ಳುತ್ತಿರುವ ವಿಡಿಯೋ ಕೂಡ ಇದೀಗ ವೈರಲ್‌ ಆಗಿದೆ. 

ಆದರೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಮಾಜಿ ಸಚಿವ ಎಚ್ ​ಎಂ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.“ಆ ಮಹಿಳೆ ನನಗೆ ಕಿರಿಕಿರಿ ಮಾಡಿಕೊಂಡು ಗಲಾಟೆ ಮಾಡುತ್ತಿದ್ದರು. ಆ ಮಹಿಳೆ ಯಾರು ಎನ್ನುವುದು ನಾನು ನೋಡಿಲ್ಲ. ಪದೇಪದೆ ರಾಹುಲ್ ಗಾಂಧಿ ಎಂದು ಹೇಳುತ್ತಿದ್ದಳು. ಕೊಲೆ ಮಾಡಲು ಬಂದಿದ್ದರು, ಹೊಡೆದರು ಅನ್ನುವುದು ಸರಿಯಲ್ಲ. ವಿಡಿಯೋ ಮಾಡಬೇಡಮ್ಮ ಅಂತಾ ಮೊಬೈಲ್​ ತಳ್ಳಿದ್ದು ನಿಜ. ನಾವು ಯಾರೂ ಆಕೆಯ ಮೇಲೆ ಹಲ್ಲೆ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದಾಗಿ ಮಹಿಳೆ ಫೋನ್​ಪೇ ಮೂಲಕ 1 ಲಕ್ಷ ರೂ. ದುಡ್ಡು ಪಡೆದಿದ್ದಾಳೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದೂ ಅವರು ಹೇಳಿದ್ದಾರೆ.

Tags:    

Similar News