ಸ್ಯಾಂಡಲ್‌ವುಡ್‌ ನಟಿ ಅರ್ಚನಾ ಕೊಟ್ಟಿಗೆ ಜತೆ ಕ್ರಿಕೆಟರ್ ಶರತ್‌ ಬಿಆರ್‌ ನಿಶ್ಚಿತಾರ್ಥ

ಬೆಂಗಳೂರಿನ ಐಷಾರಾಮಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕೆಲವು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿತು.;

Update: 2025-04-20 08:38 GMT

ಹೊಸ ಚಿತ್ರಗಳನ್ನು ಹಂಚಿಕೊಂಡ ಯುವ ಜೋಡಿ.

ಕನ್ನಡ ಚಿತ್ರರಂಗದ ನಟಿ ಅರ್ಚನಾ ಕೊಟ್ಟಿಗೆ ಮತ್ತು ಐಪಿಎಲ್‌ನ ರಾಜಸ್ಥಾನ ರಾಯಲ್ಸ್‌ನ ಯುವ ಕ್ರಿಕೆಟಿಗ ಶರತ್‌ ಬಿಆರ್‌ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥದ ಸಮಾರಂಭವು ಖಾಸಗಿಯಾಗಿ, ಆಪ್ತರ ಸಮ್ಮುಖದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 

ಅರ್ಚನಾ ಕೊಟ್ಟಿಗೆ, ‘ಗುಂಗ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ‘ಗಾಂಧಿನಗರ ಜಯಂತಿ’, ‘ರಾಜರಥ’ ಮತ್ತು ‘ವಿಜಯನಗರ’ನಂತಹ ಚಿತ್ರಗಳ ಮೂಲಕ ಗಮನ ಸೆಳೆದವರು. ಇನ್ನೊಂದೆಡೆ, ಶರತ್‌ ಬಿಆರ್‌, ರಾಜಸ್ಥಾನ ರಾಯಲ್ಸ್‌ನ ಭರವಸೆಯ ವೇಗದ ಬೌಲರ್ ಆಗಿ ಐಪಿಎಲ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬೆಂಗಳೂರು ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಇಬ್ಬರೂ ತಮ್ಮ ಸ್ನೇಹದಿಂದ ಪ್ರೇಮಕ್ಕೆ ತಿರುಗಿದ ಕ್ಷಣಗಳನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. ಸಮಾನ ಆಸಕ್ತಿಗಳು ಮತ್ತು ಒಬ್ಬರಿಗೊಬ್ಬರ ಬೆಂಬಲವೇ ತಮ್ಮ ಬಂಧವನ್ನು ಗಟ್ಟಿಗೊಳಿಸಿತು ಎಂದು ಶರತ್‌ ಮತ್ತು ಅರ್ಚನಾ ಹೇಳಿಕೊಂಡಿದ್ದಾರೆ.

ನಿಶ್ಚಿತಾರ್ಥದ ಸಮಾರಂಭ 

 

ಬೆಂಗಳೂರಿನ ಐಷಾರಾಮಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕೆಲವು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿತು. ಸಾಂಪ್ರದಾಯಿಕ ಕನ್ನಡ ಶೈಲಿಯ ಉಡುಗೆಯಲ್ಲಿ ಮಿಂಚಿದ ಅರ್ಚನಾ ಮತ್ತು ಶರತ್‌, ತಮ್ಮ ಸಂತೋಷದ ಕ್ಷಣವನ್ನು ಫೋಟೋಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಸಂದರ್ಶನದಲ್ಲಿ, ಶರತ್‌ ಮತ್ತು ಅರ್ಚನಾ ತಮ್ಮ ಮದುವೆಯು ಶೀಘ್ರದಲ್ಲೇ ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ. . “ನಾವಿಬ್ಬರೂ ಒಬ್ಬರಿಗೊಬ್ಬರ ಕನಸುಗಳನ್ನು ಬೆಂಬಲಿಸುತ್ತೇವೆ. ಒಟ್ಟಿಗೆ ಜೀವನವನ್ನು ಕಟ್ಟಿಕೊಳ್ಳಲು ಉತ್ಸುಕರಾಗಿದ್ದೇವೆ,” ಎಂದು ಅರ್ಚನಾ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕ್ರಿಕೆಟ್ ಮತ್ತು ಕನ್ನಡ ಚಿತ್ರರಂಗದ ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.  

Tags:    

Similar News