Bird Flu: ಕರ್ನಾಟಕದಲ್ಲೂ ಕೋಳಿ ಜ್ವರ ಭಯ; 50ಕ್ಕೂ ಅಧಿಕ ಕೋಳಿಗಳ ಸಾವು
ಚಿಕ್ಕಬಳ್ಳಾಪರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಕೋಳಿಗಳು ಸರಣಿ ಸಾವಾಗಿದ್ದು, ಈಗಾಗಲೇ 50ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದೆ.;
ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದೆ.
ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಕರ್ನಾಟಕಕ್ಕೂ ಕಾಲಿಟ್ಟಿರುವ ಭೀತಿ ಎದುರಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದ್ದು, ಇದ್ದಕ್ಕಿಂದಂತೆ ಕೋಳಿಗಳು ಸಾಯುತ್ತಿವೆ. ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ 50ಕ್ಕೂ ಅಧಿಕ ಕೋಳಿಗಳು ಸತ್ತಿವೆ ಎಂದು ವರದಿಯಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲದೇ ಗ್ರಾಮವೆಲ್ಲಾ ಬ್ಲೀಚಿಂಗ್ ಪೌಂಡರ್ ಸಿಂಪಡಿಸಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. 400ಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮ ಇದಾಗಿದ್ದು, ಅವರು ಹಕ್ಕಿಜ್ವರದ ಭೀತಿಗೆ ಒಳಗಾಗಿದ್ದಾರೆ.
ಹಕ್ಕಿ ಜ್ವರವನ್ನು ಏವಿಯನ್ ಇನ್ಫ್ಲುಯೆಂಜ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ವೈರಲ್ ಸೋಂಕು. ಇದು ಪಕ್ಷಿಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇದು ಹೆಚ್ಚಾಗಿ ಕೋಳಿಗಳು, ಟರ್ಕಿಗಳು ಮತ್ತು ಬಾತುಕೋಳಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗಕ್ಕೆ ಕಾರಣ H5N1, H7N9 ಮತ್ತು H5N8 ವೈರಸ್ ಕಾರಣ. ಆದರೆ ಕೆಲವು ತಳಿಗಳಿಂದ ಮನುಷ್ಯರಿಗೆ ಸೋಂಕು ತಗುಲುವುದಿಲ್ಲ.