Ranya Rao News: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಉದ್ಯಮಿ ಪುತ್ರ ತರುಣ್ ರಾಜು ಬಂಧನ
Ranya Rao News: ರನ್ಯಾ ರಾವ್ ಹಾಗೂ ತರುಣ್ ರಾಜು ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ತರುಣ್ ಎಂಬುವವರೇ ರನ್ಯಾ ರಾವ್ ಅವರಿಂದ ಚಿನ್ನ ತರಿಸಿಕೊಳ್ಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.;
ರನ್ಯಾ ರಾವ್ ಹಾಗೂ ತರುಣ್ ರಾಜು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್ ಅವರಿಂದ ತರುಣ್ ಚಿನ್ನ ತರಿಸಿಕೊಳ್ಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಡಿಆರ್ ಐ ಅಧಿಕಾರಿಗಳು ಸೋಮವಾರ ಬೆಳಗ್ಗೆ ತರುಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಡಿಆರ್ಐ, ರನ್ಯಾ ರಾವ್ ಚಿನ್ನದ ಸ್ಮಗ್ಲಿಂಗ್ ಬಗ್ಗೆ ಕೋರ್ಟ್ಗೆ ಮಾಹಿತಿ ನೀಡಿದೆ. ಬರೋಬ್ಬರಿ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು, ಈ ಪ್ರಕರಣದಲ್ಲಿ ರನ್ಯಾ ‘ಮಾಸ್ಟರ್ ಮೈಂಡ್’ ಎಂದು ಉಲ್ಲೇಖ ಮಾಡಿದೆ. ಅವರು, ಟಿಶ್ಯೂ ಪೇಪರ್ ಹಾಗೂ ಬ್ಯಾಂಡೇಜ್ ಬಟ್ಟೆ ಬಳಸಿ ಚಿನ್ನ ಸಾಗಾಟ ಮಾಡಿದ್ದಾರೆ. ಚಿನ್ನ ತರುವಾಗ ತಪಾಸಣೆಯಿಂದ ಹೇಗೆ ತಪ್ಪಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ರನ್ಯಾ ಅವರ ಫೋನ್ ಕರೆ ಮಾಹಿತಿಯನ್ನು ಪರಿಶೀಲಿಸಬೇಕಾಗಿದೆ ಎಂದು ಡಿಆರ್ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರನ್ಯಾ ಫೋನ್‌ನಲ್ಲಿ ರಾಜಕೀಯ ನಾಯಕರ ನಂಬರ್ ?
ರನ್ಯಾ ಅವರಿಗೆ ರಾಜಕಾರಣಿಗಳ ಸಂಪರ್ಕವೂ ಇದೆ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಅವರ ಫೋನ್‌ನಲ್ಲಿ ಹಲವು ರಾಜಕೀಯ ನಾಯಕರ ನಂಬರ್ ಪತ್ತೆ ಆಗಿದೆ. ಹಾಲಿ ಸಚಿವರು, ಮಾಜಿ ಸಚಿವರ ನಂಬರ್ಗಳು ಇವೆ. ಕೆಲವರ ಜತೆ ರನ್ಯಾ ನಿರಂತರ ಸಂಪರ್ಕದಲ್ಲಿದ್ದರು ಎಂದೂ ತಿಳಿದು ಬಂದಿದೆ.