Bird flu | ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಬೀದರ್‌ ಗಡಿಭಾಗದಲ್ಲಿ ಹೈ ಅಲರ್ಟ್‌

ಗಡಿಭಾಗ ಬೀದರ್‌ಗೆ ಮಹಾರಾಷ್ಟ್ರದ ಬರುವ ಮೊಟ್ಟೆ, ಕೋಳಿ ಮಾಂಸ, ಗೊಬ್ಬರ ಸಾಗಾಟದ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.;

Update: 2025-02-20 09:48 GMT
Bird flu | ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಬೀದರ್‌ ಗಡಿಭಾಗದಲ್ಲಿ ಹೈ ಅಲರ್ಟ್‌
ಪ್ರಾತಿನಿಧಿಕ ಚಿತ್ರ

ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಕೊಂಡ ಹಿನ್ನಲೆಯಲ್ಲಿ ರಾಜ್ಯದಲ್ಲೂ ಹಕ್ಕಿಜ್ವರ ಭೀತಿ ಎದುರಾಗಿದೆ. ಹೀಗಾಗಿ ಗಡಿಭಾಗ ಬೀದರ್‌ಗೆ ಮಹಾರಾಷ್ಟ್ರದಿಂದ ಬರುವ ಮೊಟ್ಟೆ, ಕೋಳಿ ಮಾಂಸ, ಗೊಬ್ಬರ ಸಾಗಾಟದ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೀದರ್‌ ಜಿಲ್ಲೆಯ ಐದು ತಾಲೂಕುಗಳಾದ ಔರಾದ್ (ಬಿ) ತಾಲ್ಲೂಕಿನ ಜಂಬಗಿ, ಚಿಂತಾಕಿ, ಬದಲಗಾಂವ್, ಎಕ್ಕಾಂಬ, ಭಾಲ್ಕಿ ತಾಲ್ಲೂಕಿನ ಅಳವಾಯಿ, ಲಖನಗಾಂವ್, ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರ, ಕಮಲನಗರ ಪಟ್ಟಣ, ಹುಲಸೂರ ಪಟ್ಟಣದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಮೂರು ಪಾಳಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಹಾರಾಷ್ಟ್ರದಿಂದ ಜಿಲ್ಲೆಯ ಕಡೆಗೆ ಸಂಚರಿಸುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಮೊಟ್ಟೆ, ಕೋಳಿ ಮಾಂಸ, ಕುಕ್ಕುಟೋದ್ಯಮಕ್ಕೆ ಸಂಬಂಧಿಸಿದ ಉತ್ಪನ್ನಗಳಿದ್ದರೆ ತಡೆದು ತಪಾಸಣೆ ಮಾಡುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

'ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದಗೀರ್‌ನಲ್ಲಿ ಏಕಾಏಕಿ 40ರಿಂದ 50 ಕಾಗೆಗಳು ಸಾವನ್ನಪ್ಪಿದ್ದವು. ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ದೇಶದ ಏಕಮಾತ್ರ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿತ್ತು. ಎಚ್5ಎನ್1 ವೈರಸ್‌ನಿಂದ ಉಂಟಾಗುವ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಕಾಗೆಗಳಿಂದ ಕೋಳಿಗಳಿಗೂ ಹರಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯ ಕೋಳಿ ಫಾರ್ಮ್‌ಗಳಿಗೆ ನಮ್ಮ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. 

ಮಹಾರಾಷ್ಟ್ರದ ಮೊಟ್ಟೆ, ಕೋಳಿ ಮಾಂಸವನ್ನು ನಿರ್ಬಂಧಿಸಿರುವುದರಿಂದ ಜಿಲ್ಲೆಯ ವ್ಯಾಪಾರಸ್ಥರು ನೆರೆಯ ತೆಲಂಗಾಣ, ಆಂಧ್ರ ಪ್ರದೇಶದ ಮೂಲಕ ಆಮದು ಮಾಡಿಕೊಳ್ಳುತ್ತಿದ್ದಾರೆ.

Tags:    

Similar News