Gold Smuggling Case |ನಟಿ ರನ್ಯಾ ಚಿನ್ನ ಪ್ರಕರಣ: ಬಂಧಿತ ಆಪ್ತ ಸ್ನೇಹಿತ ತರುಣ್‌ ತೆಲುಗು ನಟ!

ರನ್ಯಾ ಆಪ್ತನಾಗಿರುವ ತರುಣ್ ರಾಜ್ ತೆಲುಗು ಸಿನಿಮಾದಲ್ಲಿ ಸಕ್ರಿಯನಾಗಿದ್ದು, ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾನೆ.;

Update: 2025-03-13 08:02 GMT

ಬಂಧಿತನಾಗಿರುವ ನಟಿ ರನ್ಯಾ ಆಪ್ತ ಸ್ನೇಹಿತ ತರುಣ್ ರಾಜ್ ತೆಲುಗು ನಟ.

ರನ್ಯಾ ರಾವ್‌ ಚಿನ್ನ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಸ್ನೇಹಿತ ತರುಣ್​​ ರಾಜ್ ಎಂಬಾತನನ್ನು ಅಬಕಾರಿ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದು, ಇದೀಗ ಆತ ತೆಲುಗು ನಟ ಎಂಬುದು ಬೆಳಕಿಗೆ ಬಂದಿದೆ. ರನ್ಯಾ ಆಪ್ತ ಸ್ನೇಹಿತನಾಗಿರುವ ತರುಣ್ ರಾಜ್ ತೆಲುಗು ಸಿನಿಮಾದಲ್ಲಿ ಸಕ್ರಿಯನಾಗಿದ್ದು, ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾನೆ.

ಸಿನಿಮಾ ನಟನಾಗಲು ಆತ ತನ್ನ ಹೆಸರನ್ನು ತರುಣ್ ಕೊಂಡೂರು ರಾಜ್ ಎಂಬುದರ ಬದಲಾಗಿ ವಿರಾಟ್ ಕೊಂಡೂರು ರಾಜ್ ಎಂದು ಬದಲಾಯಿಸಿಕೊಂಡಿದ್ದ. ತೆಲುಗು ಸಿನೆಮಾರಂಗದಲ್ಲಿ ಎಲ್ಲರ ಜೊತೆಗೂ ವಿರಾಟ್ ಅಂತಲೇ ಗುರುತಿಸಿಕೊಂಡಿದ್ದ ತರುಣ್ ರಾಜ್‌ 2018 ರಲ್ಲಿ ತೆರೆ ಕಂಡಿದ್ದ ತೆಲುಗಿನ ಪರಿಚಯಂ ಸಿನಿಮಾದ ನಾಯಕನಟನಾಗಿ ಅಭಿನಯ ಮಾಡಿದ್ದ. ಹೀಗಾಗಿ ಸಿನಿಮಾ ಮೂಲಕವೇ ನಟಿ ರನ್ಯಾ ಜೊತೆ ಸ್ನೇಹ ಬೆಳೆಸಿದ್ದ. ಆ ಬಳಿಕ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್ ನಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸದ್ಯ ಡಿಆರ್ ಐ ಕಸ್ಟಡಿಯಲ್ಲಿ ಇರುವ ತರುಣ್ ರಾಜ್ ಅಲಿಯಾಸ್‌ ವಿರಾಟ್ ಕೊಂಡೂರು ರಾಜ್ ನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

 ತರುಣ್‌ರಾಜ್‌ ಸ್ಟಾರ್ ಹೋಟೆಲ್ ಮಾಲೀಕರೊಬ್ಬರ ಮೊಮ್ಮಗ ಮತ್ತು ಉದ್ಯಮಿಯ ಪುತ್ರನಾಗಿದ್ದು, ನಟಿಯಾಗಿರುವ ರನ್ಯಾ ಹಲವು ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು, ಸ್ವಾಮೀಜಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಜತೆಗೆ ಸಖ್ಯ ಹೊಂದಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಚಾರಣೆ ಮುಂದುವರೆದಿದೆ. 

Tags:    

Similar News