Loksabha Election Results 2024| ಬಿಜೆಪಿ+ ಜೆಡಿಎಸ್‌ -19 , ಕಾಂಗ್ರೆಸ್- 9

Update: 2024-06-04 01:04 GMT
Live Updates - Page 4
2024-06-04 06:17 GMT

ಹಾವೇರಿ ಲೋಕಸಭಾ ಕ್ಷೇತ್ರ

ಬಸವರಾಜ ಬೊಮ್ಮಾಯಿ (ಬಿಜೆಪಿ): 1,97,281

ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್): 1,84,418

ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ 12,863 ಮತಗಳ ಮುನ್ನಡೆ

2024-06-04 06:16 GMT

ಕೊಪ್ಪಳ ಲೋಕಸಭಾ ಕ್ಷೇತ್ರ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮುನ್ನಡೆ ಹಂತಹಂತವಾಗಿ ಕುಸಿತದ ಹಾದಿಯಲ್ಲಿ ಸಾಗಿದ್ದು, ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 76 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.

ರಾಜಶೇಖರ 2,76,842 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ 2,76918 ಮತಗಳನ್ನು ಪಡೆದಿದ್ದಾರೆ.

2024-06-04 06:15 GMT

ಹಾಸನ ಲೋಕಸಭಾ ಕ್ಷೇತ್ರ

ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ - 3,46,543

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ - 3,52,292

5,749 ಮತಗಳಿಂದ ಕಾಂಗ್ರೆಸ್‌ ಮುನ್ನಡೆ

4,735 ನೋಟಾ ಮತಗಳು

2024-06-04 06:14 GMT

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ 50,453 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚೌಟ 2,42,383 ಮತ, ಕಾಂಗ್ರೆಸ್ ನ ಪದ್ಮರಾಜ್ ಆರ್.ಪೂಜಾರಿ 1,91,930 ಮತ ಪಡೆದಿದ್ದಾರೆ. ನೋಟಾಕ್ಕೆ 7780 ಮತ ಚಲಾವಣೆ ಆಗಿದೆ.

2024-06-04 06:13 GMT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್‌ ಅವರು 3,34,439 ಮತಗಳನ್ನು ಪಡೆದಿದ್ದಾರೆ. ಒಂದು ಲಕ್ಷ ಮತಗಳ ಸನಿಹವಿದ್ದ ಅವರ ಲೀಡ್ ಮತಗಳ ಅಂತರ 84,515 ಮತಗಳಿಗೆ ಇಳಿಕೆಯಾಗಿದೆ.

ಚಲಾವಣೆಯಾಗಿರುವ 19.14 ಲಕ್ಷ ಮತಗಳ ಪೈಕಿ ಇದುವರೆಗೆ ಸುಮಾರು 6 ಲಕ್ಷ ಮತಗಳ ಎಣಿಕೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರು ಹಿನ್ನಡೆ ಅನುಭವಿಸಿದ್ದಾರೆ.

2024-06-04 06:13 GMT

ರಾಯಚೂರು ಲೋಕಸಭಾ ಕ್ಷೇತ್ರ

ರಾಯಚೂರು ಎಸ್.ಟಿ.ಮೀಸಲು ಲೋಕಸಭಾ ಕ್ಷೇತ್ರದ ಎಣಿಕೆಯಲ್ಲಿ ಕಾಂಗ್ರೆಸ್‌ನ ಜಿ.ಕುಮಾರ ನಾಯಕ 99,437 ಹಾಗೂ ಬಿಜೆಪಿಯ ರಾಜಾ ಅಮರೇಶ್ವರ ನಾಯಕ 91,730 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 7,707 ಮತಗಳ ಅಂತರದಿಂದ ಮುಂದೆ ಇದ್ದಾರೆ. 1,672 ಮಂದಿ ನೋಟಾ ಚಲಾಯಿಸಿದ್ದಾರೆ.

2024-06-04 06:12 GMT

ತುಮಕೂರು ಲೋಕಸಭಾ ಕ್ಷೇತ್ರ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 72,573 ಮತಗಳ ಮುನ್ನಡೆ ಪಡೆದಿದ್ದಾರೆ. ಮತ ಎಣಿಕೆ ಪ್ರಾರಂಭದಿಂದಲೂ ಸೋಮಣ್ಣ ಮುನ್ನಡೆ ಸಾಧಿಸಿದ್ದಾರೆ. ಸೋಮಣ್ಣ2,79,392 ಮತ ಪಡೆದಿದ್ದು, ಮುದ್ದಹನುಮೇಗೌಡ 2,06,819 ಮತ ಪಡೆದಿದ್ದಾರೆ.

2024-06-04 06:12 GMT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ಒಟ್ಟು ಮತದಾನ - 12,45,168

ತೇಜಸ್ವಿ ಸೂರ್ಯ (ಬಿಜೆಪಿ)- 2,22,384

ಸೌಮ್ಯಾ ರೆಡ್ಡಿ (ಕಾಂಗ್ರೆಸ್)- 1,11,106

ಅರುಣ್ ಪ್ರಸಾದ್ (ಬಿಎಸ್ಪಿ)- 677

ವಾಟಾಳ್ ನಾಗರಾಜ್ (ಕನ್ನಡ ಚಳವಳಿ ಪಕ್ಷ)- 602

ಬಿಜೆಪಿ ಮುನ್ನಡೆ- 111278

2024-06-04 06:11 GMT

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 3,23,826 ಮತಗಳನ್ನು ಪಡೆದು 66,125 ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ 2,57,701 ಮತಗಳನ್ನು ಪಡೆದಿದ್ದಾರೆ. ಯದುವೀರ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

2024-06-04 06:10 GMT

ಬೀದರ್ ಲೋಕಸಭಾ ಕ್ಷೇತ್ರ

ಬೀದರ್ ಲೋಕಸಭಾ ಕ್ಷೇತ್ರದ ಐದನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರು 51,970 ಮತಗಳ ಮುನ್ನಡೆ ಗಳಿಸಿದ್ದಾರೆ.

ಸಾಗರ್ ಖಂಡ್ರೆ ಅವರು 2,30,633 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ 1,78,663 ಮತಗಳನ್ನು ಗಳಿಸಿದ್ದಾರೆ.

Tags:    

Similar News